ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಮಹಿಳಾ ಏಷಿಯಾ ಕಪ್ ಹಾಕಿ: ಸೆಮಿಗೆ ಭಾರತ (womens Asia Cup | Hockey | India | Semifinal)
Feedback Print Bookmark and Share
 
ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ 1-1ರ ಅಂತರದ ಡ್ರಾ ಗಳಿಸಿದ ಭಾರತೀಯ ತಂಡವು ಇಲ್ಲಿ ನಡೆಯುತ್ತಿರುವ ಏಳನೇ ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಸೆಮಿಗೇರಲು ಭಾರತಕ್ಕೆ 'ಎ' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಕನಿಷ್ಠ ಪಕ್ಷ ಡ್ರಾ ಸಾಧಿಸಬೇಕಾಗಿತ್ತು. ಉತ್ತಮ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ಪಡೆ ಈ ಮೂಲಕ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

ಬಾರತದ ಪರ ಬಿನಿತೊ ಟೊಪ್ಪೊ 27ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಈ ಮೊದಲು ಮಲೇಷ್ಯಾದ ಜೂಲಿಯಾನಿ ಮೊಹಮ್ಮದ್ ದಿನ್ ನಾಲ್ಕನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು.

‘ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಚೀನಾ ಸೆಮಿಫೈನಲ್‌ಗೆ ಪ್ರವೇಶಿಸಿತು. ಎರಡನೇ ಸ್ಥಾನ ಗಟ್ಟಿಸಿಕೊಂಡ ಭಾರತ ಅಂತಿಮ ನಾಲ್ಕರ ಘಟ್ಟದಲ್ಲಿ 'ಬಿ' ಗುಂಪಿನ ಅಗ್ರಸ್ಥಾನಿ ಕೊರಿಯಾ ವಿರುದ್ಧ ಪೈಪೋಟಿ ನಡೆಸಲಿದೆ.

ಕೊರಿಯಾ ಮತ್ತೊಂದು ಲೀಗ್ ಪಂದ್ಯದ್ಲಲಿ ಚೈನೀಸ್ ತೈಪೆಯನ್ನು 15-0 ಗೋಲುಗಳಿಂದ ಬಗ್ಗುಬಡಿಯಿತು.

ಸಂಬಂಧಿತ ಮಾಹಿತಿ ಹುಡುಕಿ