ಕಳಪೆ ಪ್ರದರ್ಶನ ನೀಡಿದ ವಿಶ್ವ ಚಾಂಪಿಯನ್ ಭಾರತದ ಪಂಕಜ್ ಅಡ್ವಾಣಿ ವಿಯೆಟ್ನಾಂನಲ್ಲಿ ನಡೆಯುತ್ತಿರುವ ಏಷಿಯನ್ ಒಳಾಂಗಣ ಕ್ರೀಡಾಕೂಟದ ಸ್ನೂಕರ್ 15-ರೆಡ್ ವಿಭಾಗದಲ್ಲೂ ಸೋಲನ್ನು ಅನುಭವಿಸಿದ್ದಾರೆ.
ಈ ಮೊದಲು ಅರು 12-ರೆಡ್ ವಿಭಾಗದಲ್ಲೂ ಆಘಾತಕಾರಿ ಸೋಲುಂಡಿದ್ದರು.
ಇದೀಗ 15-ರೆಡ್ ವಿಭಾಗದಲ್ಲಿ ಬುಧವಾರ ನಡೆದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪದಕದ ಆಸೆ ಮೂಡಿಸಿದ್ದ ಅಡ್ವಾಣಿ ಅವರಿಂದ ಕ್ವಾರ್ಟರ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡುಬಂದಿಲ್ಲ. ಅವರು 65-10 49-81 41-65 72-67 11-56 68-42 39-65ರ ಅಂತರದಲ್ಲಿ ಚೀನಾದ ಲಿನ್ ಲಾಂಗ್ ಎದುರು ಮುಗ್ಗರಿಸಿದರು.
ಇತ್ತೀಚೆಗಷ್ಟೇ ಅಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದರು.