ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಗೇಮ್ಸ್‌ಗೆ ಸರಕಾರದಿಂದ 1620 ಕೋಟಿ ರೂಪಾಯಿ (Commonwealth Games | budget | central government | Ambika Soni)
Feedback Print Bookmark and Share
 
ಕಾಮಗಾರಿ ವಿಳಂಬ ಹಾಗೂ ಅಧಿಕ ವೆಚ್ಚಗಳ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಕೇಂದ್ರ ಸರಕಾರ 1620 ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದೆ. ಆದರೆ ಇದನ್ನು ಗೇಮ್ಸ್ ಸಂಘಟನಾ ಸಮಿತಿಗೆ ಸರಕಾರವು ಸಾಲದ ರೂಪದಲ್ಲಿ ನೀಡಲಿದೆ.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾಪವನ್ನು ಅಂಗೀಕರಿಸಿದ ಕೇಂದ್ರ ಸರಕಾರವು ಗೇಮ್ಸ್‌ಗಾಗಿ ಪರಿಷ್ಕೃತ ಅನುದಾನ ನೀಡಲು ಒಪ್ಪಿಗೆ ನೀಡಿದ್ದು, 1620 ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ನೀಡಲು ಅನುಮೋದನೆ ನೀಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಗೇಮ್ಸ್‌ಗೆ 767 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಇದೀಗ ಪರಿಷ್ಕರಣೆಗೊಳಿಸಲಾಗಿರುವ ಮೊತ್ತವನ್ನು ಕೇಂದ್ರದ ಪ್ರಸಕ್ತ ಬಡ್ಡಿ ದರ ನೀತಿಯ ಪ್ರಕಾರ ಒದಗಿಸಲಿದೆ.

ಅಂದಾಜು ವೆಚ್ಚ ಹೆಚ್ಚಾದುದಕ್ಕೆ ಕಾರಣ ನೀಡಿದ ಅವರು, ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದ ವೆಚ್ಚ ಹಾಗೂ ದಂಡ ಸಂಚರಿಸುವ ದಿನಗಳ ಏರಿಕೆಯು ಖರ್ಚು ವೆಚ್ಚವನ್ನು ಅಧಿಕಗೊಳಿಸಿದೆ. ಅಲ್ಲದೆ ಮೂಲಸೌಕರ್ಯಗಳನ್ನು ಕೂಡಾ ಉನ್ನತ ಮಟ್ಟದಲ್ಲಿ ಒದಗಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಗೇಮ್ಸ್ ದಂಡವು ಅಂತಾರಾಷ್ಟ್ರೀಯ ವಲಯದಲ್ಲಿ 136 ದಿನಗಳ ಕಾಲ ಸುತ್ತಲಿದೆ ಎಂದು ನಿಗದಿಯಾಗಿತ್ತು. ಅದೀಗ 240 ದಿನಗಳಿಗೆ ಏರಿಕೆಯಾಗಿದೆ. ಅಲ್ಲದೆ ದೇಶೀಯ ವಲಯದ ಸುತ್ತಾಟವು 60 ದಿನಗಳಿಂದ 100 ದಿನಗಳಿಗೆ ಏರಿಕೆಯಾಗಿದೆ.

ಗೇಮ್ಸ್‌ನಿಂದಾಗಿ 1708 ಕೋಟಿ ರೂಪಾಯಿಗಳ ಆದಾಯವನ್ನು ಗೇಮ್ಸ್ ಸಂಘಟನಾ ಸಮಿತಿಯು ನಿರೀಕ್ಷಿಸುತ್ತಿದೆ ಎಂದೂ ಸೋನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ