ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಭಾರತಕ್ಕೆ ಒಂದು ಬೆಳ್ಳಿ, 7 ಕಂಚಿನ ಪದಕ (Indoor Asian Games | India | Medal | Kabaddi)
Feedback Print Bookmark and Share
 
ಮೂರನೇ ಏಷಿಯನ್ ಒಳಾಂಗಣ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯರು ಗುರುವಾರದಂದು ಒಂದು ಬೆಳ್ಳಿ ಸಹಿತ ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಮಹಿಳಾ ಬಾಸ್ಕೆಟ್‌ಬಾಲ್‌ನ ಫೈನಲ್‌ನಲ್ಲಿ ನಿರಾಸೆ ಕಂಡ ಭಾರತೀಯರು ಬೆಳ್ಳಿಗೆ ತೃಪ್ತಿಪಟ್ಟರು. ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತೀಯ ಮಹಿಳಾ ಪಡೆ ಫೈನಲ್‌ನಲ್ಲಿ ಸೋತರು.

ಅದೇ ವೇಳೆ ಪುರುಷರ ಕಬಡ್ಡಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಭಾರತ ಪದಕ ಖಚಿತಪಡಿಸಿದ್ದು, ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಇರಾನ್ ತಂಡವನ್ನು ಎದುರಿಸಲಿದೆ.

ಭಾರತ ಸಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 59-18ರ ಅಂತರದಲ್ಲಿ ಬಗ್ಗುಬಡಿದಿತ್ತು.

4x100 ಮೀಟರ್ ಪ್ರಿ ಸ್ಟೈಲ್ ತಂಡ ವಿಭಾಗದ ಈಜು ಸ್ಪರ್ಧೆಯಲ್ಲಿ ಭಾರತದ ವೀರ್‌ಧವಲ್ ಖಾಡೆ, ರೆಹನ್ ಪೂಂಚಾ, ಅರ್ಜುನ್ ಜೆಟ್ಲಿ ಮತ್ತು ಅರುಣ್ ಡಿ ಸೋಜಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಹಿಳಾ 50ಕೆ.ಜಿ ಬಾಕ್ಸಿಂಗ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿರುವ ರತ್ನದೀಪ್ ಕೂಡಾ ಪದಕವನ್ನು ಖಾತ್ರಿಪಡಿಸಿದರು. ಅವರು ಸೆಮಿಯಲ್ಲಿ ಥಾಯ್ಲೆಂಡ್‌ನ ಪೊಂಗ್‌ಥಲಾನ್‌ರನ್ನು 12-10ರಲ್ಲಿ ಮಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ