ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ ಜೊಕೊವಿಕ್ (Novak Djokovic | Swiss Indoors | quarter finals |Roger Federer)
Feedback Print Bookmark and Share
 
ಭರ್ಜರಿ ಪ್ರದರ್ಶನ ನೀಡಿದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ಸ್ವಿಸ್ ಒಳಾಂಗಣ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಜೊಕೊವಿಕ್, ಜೆಕ್ ಗಣರಾಜ್ಯ ಜಾನ್ ಹ್ರೆನಿಚ್‌ರನ್ನು 6-0, 6-0ರ ಅಂತರದ ನೇರ ಸೆಟ್‌ನಲ್ಲಿ ಬಗ್ಗುಬಡಿದರು.

ಕೇವಲ 52 ನಿಮಿಷದಲ್ಲಿ ಪಂದ್ಯವನ್ನು ವಶಪಡಿಸಿಕೊಂಡ ಜೊಕೊವಿಕ್ ಎದುರಾಳಿಗೆ ಯಾವುದೇ ಪಾಯಿಂಟ್ ಬಿಟ್ಟುಕೊಡಲಿಲ್ಲ.

ಅದೇ ವೇಳೆ ವಿಶ್ವ ನಂ.1 ಆಟಗಾರ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಅಂತಿಮ ಎಂಟರ ಘಟ್ಟದಲ್ಲಿ ಕೊರೊಲಿವ್‌ರನ್ನು ಎದುರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ