ಅಗ್ರ ಶ್ರೇಯಾಂಕಿತ ಬ್ರಿಟನ್‌ನ ಆಂಡಿ ಮುರ್ರೆ ಮತ್ತು ಡೆವಿಡೆಂಕೊ ಸ್ಪೇನ್‌ನಲ್ಲಿ ನಡೆಯುತ್ತಿರುವ ವೆಲೆನ್ಸಿಯಾ ಓಪನ್ ಟೆನಿಸ್ ಟೂರ್ನಮೆಂಟ್‌ನ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅದೇ ವೇಳೆ ಸ್ನಾಯು ಸೆಳೆತಕ್ಕೊಳಗಾದ ಡೇವಿಡ್ ಫೆರರ್ ಕೂಟದಿಂದ ಹಿಂದೆ ಸರಿದಿದ್ದಾರೆ.
ಗಾಯದಿಂದ ಗುಣಮುಖವಾಗಿರುವ ಮುರ್ರೆ ಗುರುವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಲಿಯಾರ್ನಾಡೊ ಮೇಯರ್‌ರನ್ನು 6-4, 3-6, 6-3ರ ಅಂತರದಲ್ಲಿ ಮಣಿಸಿದರು.
ಮುರ್ರೆ ಅಂತಿಮ ಎಂಟರ ಘಟ್ಟದಲ್ಲಿ ಸ್ಪೇನ್‌ನ ಅಲ್ಬೆರ್ಟ್ ಮೊಂಟಾನೆಸ್‌ರನ್ನು ಎದುರಿಸಲಿದ್ದಾರೆ. ಅಲ್ಪೆರ್ಟ್ ಸ್ಪೇನ್‌ನವರೇ ಆದ ಫೆರರ್ ಹಿಂದೆ ಸರಿದ ಹಿನ್ನಲೆಯಲ್ಲಿ ಮುನ್ನಡೆ ಪಡೆದರು.
ಸ್ನಾಯು ಸೆಳೆತಕ್ಕೊಳಗಾಗಿರುವ ಫೆರರ್ ಮುಂದಿನ ವಾರ ನಡೆಯಲಿರುವ ಪ್ಯಾರಿಸ್ ಮಾಸ್ಟರ್ ಕೂಟದಲ್ಲಿಯೂ ಭಾಗವಹಿಸುವುದರಿಂದ ವಂಚತರಾಗಲಿದ್ದಾರೆ.
ಅದೇ ವೇಳೆ ಎರಡನೇ ಶ್ರೇಯಾಂಕಿತ ನಿಕೊಲೆ ಡೆವಿಡೆಂಕೊ ಕೂಡಾ ಮುನ್ನಡೆ ಗಳಿಸಿದ್ದಾರೆ. ಡೆವಿಡೆಂಕೊ ಅರ್ಜೆಂಟೀನಾದ ಜುವನ್ ಮೊನಕೊರನ್ನು 6-3, 7-5ರ ಅಂತರದಲಲ್ಲಿ ಮಣಿಸಿದರು.