ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಉದ್ದೀಪನಾ ದ್ರವ್ಯ ಸೇವನೆ ಒಪ್ಪಿಕೊಂಡ ಆಗಾಸ್ಸಿ (Andre Agassi | crystal methamphetamine | Tennis | Martina Navratilova)
Feedback Print Bookmark and Share
 
ಕ್ರಿಸ್ಟಲ್ ಮೆತ್ ಸೇವನೆ ಸಂಬಂಧ ಬರುತ್ತಿರುವ ಟೀಕೆಗಳಿಗೆ ಕಾರ್ಯಕ್ರಮವೊಂದರಲ್ಲಿ ಉತ್ತರಿಸಿರುವ ಆಂದ್ರೆ ಅಗಾಸ್ಸಿ, 1997ರಲ್ಲಿನ ಖಿನ್ನತೆಯಿಂದ ಹೊರ ಬರಲು ಅದರ ಅಗತ್ಯವಿತ್ತು ಎನ್ನುವ ಮೂಲಕ ಉದ್ದೀಪನಾ ದ್ರವ್ಯ ಸೇವನೆಯನ್ನು ಒಪ್ಪಿಕೊಂಡಿದ್ದಾರೆ.

ಆಗಾಸ್ಸಿ ಸಿಬಿಎಸ್‌ನ '60 ಮಿನಿಟ್' ಎಂಬ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆಗಾಸ್ಸಿ ಡ್ರಗ್ಸ್ ಸೇವನೆ ಪ್ರಕರಣ, ಜೀವನ ಹಾಗೂ ಕ್ರೀಡಾ ಬಾಳ್ವೆಯ ಕುರಿತು ವಿವರಣೆ ನೀಡಲಾಗಿತ್ತು.

ಡ್ರಗ್ಸ್ ಸೇವನೆ ಮಾಡುತ್ತಿದ್ದುದನ್ನು ಸಮರ್ಥಿಸಿಕೊಳ್ಳುತ್ತಿದ್ದ ಖ್ಯಾತ ಬೇಸ್‌ಬಾಲ್ ತಾರೆ ರೋಜರ್ ಕ್ಲೆಮೆನ್ಸ್‌ರಿಗೆ ಅಗಾಸ್ಸಿಯವರನ್ನು ಹೋಲಿಸಿರುವ ಮಾರ್ಟಿನಾ ನವ್ರಾಟಿಲೋವಾ ಹೇಳಿಕೆಯನ್ನು ಸಂದರ್ಶನಕಾರ ಕೇಟ್ ಕೋರಿಕ್ ಹೇಳುತ್ತಿದ್ದಂತೆ ಅಗಾಸ್ಸಿ ತೀರಾ ಭಾವುಕರಾದರು.

ಇದು ನಾನು ಕೇಳಲಿಚ್ಛಿಸದ ವಿಚಾರ. ಆದರೂ ಒಪ್ಪಿಕೊಳ್ಳುತ್ತೇನೆ. 1997ರಲ್ಲಿ ತೀವ್ರ ಕುಸಿತದ ಹಾದಿಯಲ್ಲಿದ್ದ ತನಗೆ ಇದರ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ತಾನು ತೀರಾ ಖಿನ್ನನಾಗಿದ್ದೆ ಎಂದು ಅಗಾಸ್ಸಿ ಪ್ರತಿಕ್ರಿಯಿಸಿದರು.



ಸಂಬಂಧಿತ ಮಾಹಿತಿ ಹುಡುಕಿ