ಭಾರತದ ಪ್ರಕಾಶ್ ಅಮೃತ್‌ರಾಜ್ ಹಾಗೂ ಪುರವ್ ರಾಜಾ ಅವರು ದಕ್ಷಿಣ ಕೊರಿಯಾದ ಚುಂಚೆಯೊನ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಶ್ರೇಯಾಂಕ ಹೊಂದಿರುವ ಪ್ರಕಾಶ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಂತದಲ್ಲಿಯೇ ಮುಗ್ಗರಿಸಿದ್ದಾರೆ. ಒಂದು ಲಕ್ಷ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಭಾರತದ ಯುವ ಆಟಗಾರ 6-7(5), 4-6ರಲ್ಲಿ ಹಾಲೆಂಡ್‌ನ ಐಗೋಯಿ ಸಿಸ್ಲಿಂಗ್ ವಿರುದ್ಧ ಸೋಲನುಭವಿಸಿದರು.
ಪುರವ್ ರಾಜ್ ಅವರು ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಸಾದಿಕ್ ಖಾದಿರ್ ಜೊತೆಗೂಡಿ ಆಡಿದರು. ಈ ಜೋಡಿಯು ಫೈನಲ್ ತಲುಪುವ ಕೊನೆಯ ಅಡೆತಡೆಯನ್ನು ದಾಟಲು ಮಾತ್ರ ಯಶಸ್ವಿಯಾಗಲಿಲ್ಲ.