ಮಂಡಿನೋವಿನಿಂದ ತೊಂದರೆ ಅನುಭವಿಸುತ್ತಿರುವ ಅಮೆರಿಕದ ಆಂಡಿ ರೊಡ್ಡಿಕ್ ಭಾನುವಾರದಿಂದ ಆರಂಭವಾಗಲಿರುವ ಪ್ಯಾರಿಸ್ ಮಾಸ್ಟರ್ಸ್ ಟೂರ್ನ್‌ಮೆಂಟ್‌ನಿಂದ ಹಿಂದೆ ಸರಿದಿರುವುದಾಗಿ ಶುಕ್ರವಾರ ಸಂಘಟಕರು ತಿಳಿಸಿದ್ದಾರೆ.
ವಿಶ್ವದ 6ನೇ ಶ್ರೇಯಾಂಕಿತ ಆಟಗಾರನಾಗಿರುವ ಆಂಡಿ ಮಂಡಿನೋವಿನಿಂದ ನರಳುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಕಳೆದ ತಿಂಗಳು ನಡೆದ ಶಾಂಘೈ ಮಾಸ್ಟರ್ಸ್ ಟೂರ್ನ್‌ಮೆಂಟ್‌ನಿಂದಲೂ ಹೊರಗುಳಿದಿದ್ದರು.
ತೀವ್ರವಾಗಿ ಮಂಡಿನೋವಿನಿಂದ ಬಳಲುತ್ತಿರುವ ಕಾರಣದಿಂದಾಗಿ ಪ್ಯಾರಿಸ್ ಮಾಸ್ಟರ್ಸ್ ಟೂರ್ನ್‌ಮೆಂಟ್‌ನಲ್ಲಿಯೂ ಭಾಗವಹಿಸುತ್ತಿಲ್ಲ ಎಂದು ಸಂಘಟಕರು ವಿವರಿಸಿದ್ದಾರೆ.