ಅಮೆರಿಕದ ಚಾರ್ಲೋಟ್ಸ್‌ವಿಲ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸೋಮ್‌ದೇವ್ ದೇವ್‌ವರ್ಮನ್ ಸೆಮಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ ಸಹವರ್ತಿ ಸನಮ್ ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿಯೇ ಪರಾಭವಗೊಂಡರು.
3ನೇ ಶ್ರೇಯಾಂಕದ ಸೋಮ್‌ದೇವ್ ಕೊನೆಯ ಎಂಟರ ಘಟ್ಟದ ಹಣಾಹಣಿಯಲ್ಲಿ ಎದುರಾಳಿ ಡಚ್‌ನ ಮೆಟ್ವೆ ಮಿಡ್ಡೆಲ್‌ಕೂಪ್ ಅನ್ನು 6-3, 6-4ರ ಅಂತರದಿಂದ ಸೋಲಿಸಿದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಸನಮ್ ಸಿಂಗ್ ಅವರು 5-7, 7-6(3), 6-7(5) ಎದುರಾಳಿ ಅಮೆರಿಕದ ಕೇವಿನ್ ಕಿಮ್‌ಗೆ ಶರಣಾದರು.
ಸೋಮ್‌ದೇವ್ ದೇವ್‌ವರ್ಮನ್ ಹಾಗೂ ಸನಮ್ ಸಿಂಗ್ ಅವರು ಚಾರ್ಲೋಟ್ಸ್‌ವಿಲ್‌ನಲ್ಲಿ ನಡೆಯುತ್ತಿರುವ ವರ್ಜಿನಿಯಾ ನ್ಯಾಷನಲ್ ಬ್ಯಾಂಕ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
3ನೇ ಶ್ರೇಯಾಂಕದ ಸೋಮ್‌ದೇವ್ 6-2, 1-6, 6-2ರಲ್ಲಿ ದಕ್ಷಿಣ ಆಫ್ರಿಕಾದ ಐಜಾಕ್ ವಾನ್ ಡರ್ ಮೆರ್ವ್ ಅವರನ್ನು ಪರಾಜಯಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಸನಮ್ 1-6, 6-2, 6-1ರಲ್ಲಿ ಪೆರುಗ್ವೆಯ ರಮೊನ್ ಡೆಲಾಗಡೊ ಅವರನ್ನು ಸೋಲಿಸಿದ್ದರು.