ಸ್ವಿಸ್ ಇಂಡೋರ್ ಟೆನಿಸ್ ಟೂರ್ನ್‌ಮೆಂಟ್‌ನ ಪ್ರಥಮ ಸುತ್ತಿನ ಪಂದ್ಯಾಟದಲ್ಲಿ ನೋವಾಕ್ ಜೋಕೊವಿಕ್ ಎದುರಾಳಿ ಜರ್ಮನಿಯ ಆಂಡ್ರೆಸ್ ಬೆಕ್ ಅವರನ್ನು 6-3, 7-5ಮ್ಯಾಚ್ ಪಾಯಿಂಟ್‌ಗಳ ಅಂತರದಿಂದ ಪರಾಭವಗೊಳಿಸಿದರು.
3ನೇ ಶ್ರೇಯಾಂಕದ ಸೆರ್ಬ್ ಆಟಗಾರ ಜೋಕೊವಿಕ್ ಪ್ರಥಮ ಸುತ್ತಿನ ಹಣಾಹಣಿಯಲ್ಲಿಯೇ ಪಾಯಿಂಟ್‌ಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ಗೆಲುನಿತ್ತ ಧಾವಿಸುವ ಮೂಲಕ ಬೆಕ್‌ನ್ನು ಸೋಲಿಸಿ, ಜಯ ಸಾಧಿಸಿದರು.
'ಇಂದಿನ ಪಂದ್ಯದಲ್ಲಿ ನನ್ನ ಹೊಡೆತ ಬಲವಾಗಿತ್ತು. ಹಾಗಿಯೇ ಕಡಿಮೆ ಅವಧಿಯಲ್ಲಿಯೇ ಈ ಪಂದ್ಯಾಟವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದ್ದೇನೆ'ಎಂದು ಜೋಕೊವಿಕ್ ಗೆಲುವಿನ ನಂತರ ಅಭಿಪ್ರಾಯ ವ್ಯಕ್ತಪಡಿಸಿದರು.