ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಏಷ್ಯಾ ಹಾಕಿ ಕಪ್: ಭಾರತ-ಚೀನಾ ಹಣಾಹಣಿ (Women's Asia Cup | China | India | hockey tournament)
Feedback Print Bookmark and Share
 
ಭಾರತದ ಮಹಿಳೆಯರ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ ತಂಡ 3-2ಗೋಲುಗಳಿಂದ ದಕ್ಷಿಣ ಕೊರಿಯಾವನ್ನ ಮಣಿಸುವ ಮೂಲಕ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್ ತಲುಪಿದರು.

ಈ ಭರ್ಜರಿ ಗೆಲುವಿನೊಂದಾಗಿ ಭಾರತ ತಂಡ 2010ರಲ್ಲಿ ಅರ್ಜೈಂಟಿನಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಂತಾಗಿದೆ.

ದಕ್ಷಿಣ ಕೊರಿಯಾದ ವಿರುದ್ಧದ ಪಂದ್ಯದಲ್ಲಿ ಭಾರತದ ವನಿತೆಯರು ಆಕರ್ಷಕ ಆಟ ತೋರಿದರು. ಜಸ್ವೀತ್ ಕೌರ್ ಎರಡು ಗೋಲು ತಂದಿತ್ತರೆ, ರಾಣಿ ರಾಮ್‌ಪಾಲ್ ಒಂದು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಚೀನಾ ಎದುರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಚೀನಾ ತಂಡದವರು 1-0ಗೋಲಿನಿಂದ ಜಪಾನ್ ತಂಡವನ್ನು ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದಾರೆ. ಏಕೈಕ ಗೋಲನ್ನು ಜೊ ಯು ದಿಯೊ ಗಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ