ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಬಿಲ್ಗಾರಿಕೆಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ (Archery | India | C Srither | Kh Ratan Singh)
Feedback Print Bookmark and Share
 
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ 16ನೇ ಏಷಿಯನ್ ಬಿಲ್ಗಾರಿಕಾ ಚಾಂಪಿಯನ್‌ಶಿಪ್‌ನ ಕಂಪೌಂಡ್ ವಿಭಾಗದಲ್ಲಿ ಭಾರತೀಯ ಪುರುಷರ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಸಿ. ಶ್ರೀಧರ್, ಕೆ.ಎಚ್. ರತನ್ ಸಿಂಗ್ ಮತ್ತು ಇಸಿಯಾ ಆರ್. ಸನಮ್‌ರನ್ನೊಳಗೊಂಡ ಪುರುಷರ ತಂಡ ಚಿನ್ನ ಗೆದ್ದರೆ, ಪುರುಷರ ರಿಕರ್ವ್ ಮತ್ತು ಮಹಿಳೆಯ ಕಂಪೌಂಡ್ ತಂಡಗಳು ಬೆಳ್ಳಿ ಪದಕ ಗೌರವ ಪಡೆದುಕೊಂಡಿವೆ.

ಶ್ರೀಧರ್, ರತನ್ ಮತ್ತು ಸನಮ್‌ರನ್ನೊಳಗೊಂಡ ಭಾರತೀಯ ಪುರುಷರ ಕಂಪೌಂಡ್ ತಂಡವು ಇರಾನ್ ವಿರುದ್ಧ 231-230ರ ಅಂತರದಿಂದ ರೋಚಕವಾಗಿ ಜಯಿಸಿತು.

ರಾಹುಲ್ ಬ್ಯಾನರ್ಜಿ, ಜಯಂತ ತಾಲೂಕ್ದಾರ್ ಮತ್ತು ಮಂಗಲ್ ಸಿಂಗ್ ಚಾಂಪಿಯಾರನ್ನೊಳಗೊಂಡ ಭಾರತೀಯ ಪುರುಷರ ರಿಕರ್ವ್ ತಂಡವು ಕೊರಿಯಾ ಎದುರು 219-222ರಿಂದ ಸೋಲುಂಡು ಬೆಳ್ಳಿ ಪದಕಕ್ಕೆ ಸೀಮಿತವಾಯಿತು.

ಮಹಿಳೆಯರ ಕಂಪೌಂಡ್ ತಂಡವು ಫೈನಲ್‌ನಲ್ಲಿ ಮತ್ತೊಮ್ಮೆ ಕೊರಿಯಾದಿಂದಲೇ ಮಣಿಸಲ್ಪಟ್ಟಿತು. ಜಾನು ಹಂಸ, ನಮಿತಾ ಯಾದವ್ ಮತ್ತು ಮಂಜುದಾ ಸಾಯ್‌ರವರು 215-223ರಿಂದ ಪರಾಜಯ ಹೊಂದುವ ಮೂಲಕ ಚಿನ್ನದ ಪದಕದಿಂದ ವಂಚಿತರಾದರು.

ಭಾರತೀಯ ಮಹಿಳೆಯರ ರಿಕರ್ವ್ ತಂಡವು ಚೀನಾ ವಿರುದ್ಧ ಪ್ಲೇ-ಆಫ್‌ನಲ್ಲಿ ಪರಾಜಯ ಹೊಂದಿದ್ದರಿಂದ ಕಂಚಿನ ಪದಕ ಪಡೆಯಲು ವಿಫಲವಾಯಿತು. ಇದಕ್ಕೂ ಮೊದಲು ದಕ್ಷಿಣ ಕೊರಿಯಾದೆದುರು ಸೆಮಿಫೈನಲ್‌ನಲ್ಲಿ ತಂಡವು ಸೋತಿತ್ತು.

ಅಂತಿಮ ದಿನದಂದು ಮತ್ತೊಂದು ಚಿನ್ನ ಹಾಗೂ ಎರಡು ಕಂಚಿನ ಪದಕಗಳನ್ನು ಭಾರತ ಗೆಲ್ಲುವ ಅವಕಾಶಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ