ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » 2010ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ (Argentina | World Cup | Hockey | India)
Feedback Print Bookmark and Share
 
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಹೀರೋ ಹೊಂಡಾ ಎಫ್ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಬಾಕಿ ಉಳಿದಿದ್ದ ಕೊನೆಯ ಸ್ಥಾನವನ್ನು ಅರ್ಜೆಂಟೀನಾ ಭರ್ತಿ ಮಾಡಿದೆ.

ಇದರೊಂದಿಗೆ ಫೆಬ್ರವರಿ 28ರಿಂದ ಮಾರ್ಚ್ 13ರವರೆಗೆ ದೆಹಲಿಯಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡಲಿರುವ 12 ತಂಡಗಳು ಅರ್ಹತೆ ಗಿಟ್ಟಿಸಿಕೊಂಡಂತಾಗಿದೆ.

ಕ್ಯೂಲ್ಮೆಸ್‌ನಲ್ಲಿ ನಡೆದ ಅರ್ಹತಾ ಪಂದ್ಯದ ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 4-3ರಿಂದ ಅರ್ಜೆಂಟೀನಾ ಪರಾಜಯಗೊಳಿಸಿ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು.

ಆಫ್ರಿಕಾ ಕಪ್ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಏಷಿಯಾ ಕಪ್ ವಿಜೇತ ದಕ್ಷಿಣ ಕೊರಿಯಾ, ಯೂರೋ ಹಾಕಿ ಚಾಂಪಿಯನ್‌ಶಿಪ್ ಅಗ್ರ ತಂಡಗಳಾದ ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್, ಸ್ಪೇನ್, ಓಸಿಯಾನಿಯಾ ಕಪ್ ವಿಜೇತ ಆಸ್ಟ್ರೇಲಿಯಾ, ಪಾನ್ ಅಮೆರಿಕನ್ ಕಪ್ ಗೆದ್ದ ಕೆನಡಾ, ಅರ್ಹತಾ ಪಂದ್ಯಗಳಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅರ್ಜೆಂಟೀನಾ ಗೆದ್ದು 2010ರ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಭಾರತವು ಆತಿಥೇಯ ರಾಷ್ಟ್ರವಾಗಿ ಪ್ರವೇಶ ಪಡೆದಿತ್ತು.

ದೆಹಲಿಯಲ್ಲಿ ಮುಂದಿನ ವರ್ಷ ನಡೆಯುತ್ತಿರುವುದು 12ನೇ ಹಾಕಿ ವಿಶ್ವಕಪ್. ರಾಷ್ಟ್ರ ರಾಜಧಾನಿಯಲ್ಲಿನ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಕ್ರೀಡಾಕೂಟ ನಡೆಯಲಿದೆ.

ಡಿಸೆಂಬರ್ 6ರಿಂದ 13ರವರೆಗೆ ಅರ್ಜೆಂಟೀನಾದ ಸಾಲ್ಟಾದಲ್ಲಿ ನಡೆಯಲಿರುವ ಬಿಡಿಒ ಚಾಂಪಿಯನ್ಸ್ ಚಾಲೆಂಜ್ -1 ಟೂರ್ನಮೆಂಟ್ ಮುಗಿದ ನಂತರ ಮುಂದಿನ ವರ್ಷದ ಮಹಾ ಕ್ರೀಡಾಕೂಟದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ