ಕ್ರೀಡಾಳುಗಳು | ಲೇಖನಗಳು | ಕ್ರೀಡಾಸುದ್ದಿ
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಹುಟ್ಟೂರಿಗೆ ಪ್ರಚಾರ ರಾಯಭಾರಿಯಾದ ಲಯನೆಲ್ ಮೆಸ್ಸಿ (Rosario | Lionel Messi | Buenos Aires | Argentina)
WD
ಪ್ರತಿಯೊಬ್ಬರ ಮನಸ್ಸಿನಲ್ಲೂ ತಮ್ಮ ಹುಟ್ಟೂರಿಗಾಗಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದರಂತೆ ಸಮಕಾಲೀನ ಫುಟ್ಬಾಲ್ ಜಗತ್ತಿನ ದಂತಕತೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಯನೆಲ್ ಮಸ್ಸಿ ಅವರಿಗೀಗ ಇಂತಹದೊಂದು ಅದೃಷ್ಟ ಒಲಿದು ಬಂದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬ್ಯೂನಸ್ ಐರೆಸ್ ನಗರದಿಂದ 300 ಕೀ.ಮೀ. ದೂರದಲ್ಲಿರುವ ತಮ್ಮ ಹುಟ್ಟೂರಾದ ರೊಸರಿಯೊ ಎಂಬ ಸ್ಥಳಕ್ಕೆ ಲಯನೆಲ್ ಮಸ್ಸಿ ಪ್ರಮುಖ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಅತೀವ ಸಂತಸ ವ್ಯಕ್ತಪಡಿಸಿರುವ 24ರ ಹರೆಯದ ಮೆಸ್ಸಿ, ತಮ್ಮ ಜನ್ಮಸ್ಥಳಕ್ಕೆ ರಾಯಭಾರಿಯಾಗುವುದು ಹೆಮ್ಮೆಯ ವಿಚಾರ ಎಂದು ಬಣ್ಣಿಸಿದ್ದಾರೆ.

ಪ್ರಸ್ತುತ ಕ್ರಿಸ್ಟ್‌ಮಸ್ ರಜಾದಿನದ ಮಜಾವನ್ನು ಸವಿಯುತ್ತಿರುವ ಮೆಸ್ಸಿ, ತಮಗೆ ಇಂತಹದೊಂದು ಗೌರವ ಒದಗಿಸಿದ್ದಕ್ಕಾಗಿ ಹುಟ್ಟೂರಾದ ರೊಸರಿಯೊ ಪ್ರದೇಶದ ಎಲ್ಲ ಜನರಿಗೂ ಧನ್ಯವಾದ ಹೇಳಲು ಬಯಸಿದ್ದಾರೆ.

ನನ್ನ ಕುಟಂಬ ವರ್ಗ ಸೇರಿದಂತೆ ಆಪ್ತರು ಇಲ್ಲೇ ಇದ್ದಾರೆ. ಮುಂದೊಂದು ದಿನ ಫುಟ್ಬಾಲ್ ನಿವೃತ್ತಿಯ ನಂತರ ನಾನು ಇಲ್ಲಿಯೇ ವಾಸಿಸಬೇಕಾಗಿದೆ ಎಂದಿದ್ದಾರೆ. ಸದ್ಯ 2019ರ ಪ್ಯಾನ್-ಅಮೆರಿಕಾ ಗೇಮ್ಸ್‌ನ ಆತಿಥ್ಯ ಹಕ್ಕು ಪಡೆಯುವುದಕ್ಕಾಗಿ ರೊಸರಿಯೊ ನಗರದ ಪ್ರಯತ್ನಗಳು ಮುಂದುವರಿದಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
WebduniaWebdunia