ಕಾಫಿ ಪೌಡರ್ ಫ್ರೆಶ್ ಆಗಿಡಲು ಟಿಪ್ಸ್

ಅಡುಗೆ ಮನೆಯಲ್ಲಿ ಕಾಫಿ ಮಾಡುತ್ತಿದ್ದರೆ ಹೊರಗೆ ನಿಂತವರಿಗೂ ಅದರ ಘಮ ಬರಬೇಕು. ಕಾಫಿ ಇಷ್ಟು ಘಮವಾಗಿರಲು, ದಿನಗಟ್ಟಲೇ ಫ್ರೆಶ್ ಆಗಿಡಲು ಏನು ಮಾಡುವುದು ಎಂಬ ಚಿಂತೆ ನಿಮಗಿದ್ದರೆ ಇಲ್ಲಿದೆ ಸಿಂಪಲ್ ಟಿಪ್ಸ್.

credit: social media

ಕಾಫಿ ಪೌಡರ್ ಹೆಚ್ಚು ತಂದರೆ ಅದರ ಘಮ ಬೇಗನೇ ಹೋಗದಂತೆ ತಡೆಯಲು ಕೆಲವು ಸಿಂಪಲ್ ಉಪಾಯಗಳಿವೆ

ಕಾಫಿ ಪೌಡರ್ ನ್ನು ಯಾವತ್ತೂ ಚೆನ್ನಾಗಿ ಒಣಗಿದ ಜಾಡಿಯಲ್ಲಿ ತುಂಬಿಸಿಟ್ಟರೆ ಪರಿಮಳ ಹೋಗದು

ತುಂಬಾ ದಿನ ಹಾಳಾಗಬಾರದು ಎಂದು ಎಲ್ಲಾ ವಸ್ತುಗಳನ್ನಿಡುವಂತೆ ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ

ಮೈಕ್ರೋಓವನ್, ಕಿಟಿಕಿ ಪಕ್ಕ, ಗ್ಯಾಸ್ ಸ್ಟವ್ ಪಕ್ಕ ಯಾವತ್ತೂ ಕಾಫಿ ಪೌಡರ್ ಇಡಬೇಡಿ.

ನೆನಪಿಡಿ, ಕಾಫಿ ಪೌಡರ್ ಹಾಕುವ ಜಾಡಿ ಗಾಳಿಯಾಡದಂತೆ ಕಾಪಾಡಿಕೊಳ್ಳುವುದು ಮುಖ್ಯ.

ಆದಷ್ಟು ಕಾಫಿ ಪೌಡರ್ ನ್ನು ಒಣ, ಗಾಳಿಯಾಡದಂತಹ ಜಾಗದಲ್ಲಿಟ್ಟರೆ ಬೇಗನೇ ಹಾಳಾಗದು.