PTI ವೆಸ್ಟ್ ಇಂಡೀಸ್ನಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಕೂಟದಲ್ಲಿ ಹೀನಾಯ ಪ್ರದರ್ಶನದ ಬಳಿಕ ಕ್ರಿಕೆಟ್ ಪ್ರೇಮಿಗಳಿಂದ ಛೀ ಥೂ ಎಂದೆಲ್ಲಾ ಹೀಗಳೆಸಿಕೊಂಡಿದ್ದ ಟೀಮ್ ಇಂಡಿಯಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟಿ-20 ವಿಶ್ವಕಪ್ ಎತ್ತುವ ತನಕ 2007ರಲ್ಲಿ ಸವೆಸಿದ ಹಾದಿ ಹಲವು ಏಳು ಬೀಳುಗಳನ್ನು ಹೊಂದಿತ್ತು.ಸಂದು ಹೋದ ವರ್ಷ ಭಾರತೀಯ ಕ್ರಿಕೆಟಿನಲ್ಲಿ ಯಾವ ಪರಿಯ ಬದಲಾವಣೆಗಳು ಕಂಡು ಬಂದವೆಂದರೆ, ಭವಿಷ್ಯದಲ್ಲೂ ಅವುಗಳು ತಮ್ಮ ಪ್ರಭಾವ ಬೀರುತ್ತವೆ. ಈ ಎಲ್ಲಾ