ಸ್ಟಾರ್ಗಳು ಎಂದು ಪರಿಗಣಿಸಿರುವ ನಾಯಕ ನಟರು ಅಭಿನಯಿಸಿದ ಚಿತ್ರಗಳಲ್ಲಿ ಕೆಲವು ಸೋಲುಂಡವು. 2007ರಲ್ಲಿ ಉಪೇಂದ್ರ ನಟಿಸಿದ ಅನಾಥರು ಚಿತ್ರ ಮಾತ್ರ ನಿರ್ಮಾಪಕರಿಗೆ ದುಡ್ಡು ತಂದರೂ ವಿತರಕರು ನಷ್ಟ ಅನುಭವಿಸಿದರು. ವಿವಾದ ಬೆನ್ನಿಗೆ ಕಟ್ಟಿಕೊಂಡೇ ತಯಾರಾದ ಮಸ್ತಿ, ಪರೋಡಿ, ಶಿವರಾಜಕುಮಾರ್-ಉಪೇಂದ್ರರ ಕಾಂಬಿನೇಷನ್ ಲವಕುಶ ಜಯಗಳಿಸಲಿಲ್ಲ. 2006ರಲ್ಲಿ ಮೈ ಆಟೋಗ್ರಾಫ್ ಮೂಲಕ ನಟ ನಿರ್ದೇಶಕರಾಗಿ ಹೆಸರು ಗಳಿಸಿದ ಸುದೀಪ್ ಅವರ 2007ರ ಶಾಂತಿ ನಿವಾಸ ಚಿತ್ರ ಚೆನ್ನಾಗಿ ಮೂಡಿಬಂದಿದ್ದರೂ ಪ್ರೇಕ್ಷಕ ಮಹಾಶಯ ಅದನ್ನು