ಕನ್ನಡ ಚಿತ್ರರಂಗದಲ್ಲಿ ವಿವಾದವಿಲ್ಲದ ವರ್ಷವೇ ಇಲ್ಲ. ಈ ಸಂಪ್ರದಾಯ ಮುಂದುವರೆದಂತೆ 2007ರಲ್ಲಿ ಸಹಾ ಜಗಳ ನಡೆದಿತ್ತು. ಎಸ್. ನಾರಾಯಣ್ ಹಿರಿಯ ನಿರ್ದೇಶಕರು. ದುನಿಯಾ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಆದ ವಿಜಯ್ ನಾಯಕನಾಗಿ ಅಭಿನಯಿಸಿದ ಚಿತ್ರದ ಬಿಡುಗಡೆ ಹಾಗೂ ಡಬ್ಬಿಂಗ್ ವಿಷಯದಲ್ಲಿ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ಮೇಲೆ ಒಂದು ವರ್ಷ ನಟಿಸದಂತೆ ಫಿಲಿಂಛೇಂಬರ್ ನಿರ್ಬಂಧ ವಿಧಿಸಿತ್ತು. ಇನ್ನಿತರ ವಿವಾದಗಳೆಂದರೆ ಮುಂಗಾರುಮಳೆ ಚಿತ್ರದ ತಂಡದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ