PTI ಸ್ವಾತಂತ್ರ್ಯ ಬಂದು 60 ವಸಂತಗಳನ್ನು ದಾಟಿದ ಬಳಿಕ ದೇಶಕ್ಕೊಬ್ಬ ಮಹಿಳಾ ರಾಷ್ಟ್ರಪತಿಯ ಸುಯೋಗ, ನ್ಯಾಯಕ್ಕಾಗಿ ಮಹಿಳೆಯೊಬ್ಬಳು ಬೀದಿ ಬೀದಿಯಲ್ಲಿ ಅರೆನಗ್ನಳಾಗಿ ನಡೆಯಬೇಕಾದ ಪ್ರಸಂಗ ಮತ್ತು ಮಹಿಳೆಯರು ತಮ್ಮ ಹಕ್ಕಿಗಾಗಿ, ಶಾಸನಸಭೆಗಳಲ್ಲಿ ಮೀಸಲಾತಿಗಾಗಿ, ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕುರಿತ ಈಡೇರದ ಆಶ್ವಾಸನೆಗಳು... 2007ರಲ್ಲಿ ಇಡೀ ಮಹಿಳಾ ಸಮುದಾಯವನ್ನು ಕಾಡಿದ ಸಂಗತಿ.ಪತಿ ಮತ್ತು ಮಾವನ ಮನೆಯವರ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಕಾರಣಕ್ಕೆ ಗುಜರಾತಿನ