ಚಂದ್ರಾವತಿ ಬಡ್ಡಡ್ಕ WD ಇತಿಹಾಸದ ಪಟ್ಟಿಗೆ 2007 ಸೇರುತ್ತಿದೆ. ಎಲ್ಲ ವರ್ಷಗಳಂತೆಯೆ ಈ ವರ್ಷವೂ ಹರ್ಷ-ದುಃಖ, ಏರು-ಪೇರುಗಳನ್ನು ತನ್ನ ಉದರದಲ್ಲಿ ತುಂಬಿಸಿಕೊಳ್ಳುತ್ತಾ ಮುನ್ನಡೆದಿದೆ. ಕಾಲದ ತೆಕ್ಕೆಗೆ ಜಾರುತ್ತಿರುವ 2007ರ ಕೊನೆಯ ಮೆಟ್ಟಿಲಲ್ಲಿ ನಿಂತು ಹಿಂತಿರುಗಿ ನೋಡಿದರೆ ಸುದ್ದಿಗಳ ಬುತ್ತಿಯೊಳಗೆ ಹಲವಾರು ಐಟಂಗಳಿವೆ. ರಾಜಕೀಯ, ಸಾಮಾಜಿಕ, ವೈಜ್ಞಾನಿಕ ಹೀಗೆ ಎಲ್ಲ ರಂಗಗಳಲ್ಲೂ ಏಳು ಬೀಳುಗಳಿವೆ.ಈ ವರ್ಷ ದೇಶದ ಘಟನೆಗಳ ಕುರಿತು ಅವಲೋಕಿಸಿದಾಗ ತಟ್ಟೆಂದು ಗೋಚರವಾಗುವುದು, ಉತ್ತರ ಪ್ರದೇಶದ ನಿತಾರಿ ಸರಣಿ ಕೊಲೆ