PTI ಎರಡು ತಿಂಗಳುಗಳ ಕಾಲ ಟೆನಿಸ್ನಿಂದ ದೂರ ಉಳಿದರೂ ಕೂಡ ಸಾನಿಯಾ ಮಿರ್ಜಾ ಪಾಲಿಗೆ ವರ್ಷ 2007 ಅವಿಸ್ಮರಣೀಯ ಎಂದೇ ಹೇಳಬಹುದು. ತನ್ನ ಟೆನಿಸ್ ಜೀವನದಲ್ಲಿ ಮೊದಲ ಬಾರಿಗೆ ಸಿಂಗಲ್ಸ್ನಲ್ಲಿ 27 ಶ್ರೇಯಾಂಕವನ್ನು ತಲುಪಿದ್ದು ಬಹುಶಃ ಈವರೆಗಿನ ಅವರ ಟೆನಿಸ್ ಜೀವನದ ಅಧ್ಯಾಯಗಳಲ್ಲಿ ಪ್ರಮುಖವಾದುದು ಎನ್ನಲಡ್ಡಿಯಿಲ್ಲ. 2007ರ ಪ್ರಾರಂಭದಲ್ಲಿ ಮೊಣಕಾಲು ನೋವಿನಿಂದ ಬಳಲಿ, ಶಸ್ತ್ರಚಿಕಿತ್ಸೆಯ ಬಳಿಕ ಎರಡು ತಿಂಗಳ ವಿಶ್ರಾಂತಿಯ ನಂತರ ಟೆನಿಸ್ಗೆ ಮರಳಿದ ಕೂಡಲೇ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು