1 ಕೋಟಿಗೆ ತಲುಪಿದ ಆಮ್ ಆದ್ಮಿ ಪಕ್ಷದ ಸದಸ್ಯರ ಸದಸ್ಯತ್ವ

ನವದೆಹಲಿ, ಮಂಗಳವಾರ, 28 ಜನವರಿ 2014 (13:52 IST)

PTI
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಆಮ್ ಆದ್ಮಿ ಪಕ್ಷ ಇದೀಗ ದೇಶಾದ್ಯಂತ ಆರಂಭಿಸಿದೆ. ಜನವೆರಿ 26 ಕ್ಕೆ ಅಂತ್ಯಗೊಂಡಂತೆ ಆಮ್ ಆದ್ಮಿ ಪಕ್ಷದ ಸದಸ್ಯರ ಸಂಖ್ಯೆ 1 ಕೋಟಿಗೆ ತಲುಪಿದೆ.

ದಕ್ಷಿಣ ಭಾರತದಲ್ಲಿ ತಮಿಳುನಾಡಿಗೆ ಉತ್ತಮ ಸ್ಪಂದನೆ ದೊರೆತಿಲ್ಲ.ಆದರೆ, ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣಾ, ಪಂಜಾಬ್, ನವದೆಹಲಿ, ಬಿಹಾರ್ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ಕೇವಲ 2.60 ಲಕ್ಷ ಸದಸ್ಯರು ಆಮ್ ಆದ್ಮಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 80 ಸಾವಿರ, ಕೇರಳದಲ್ಲಿ 65,000, ಆಂಧ್ರಪ್ರದೇಶದಲ್ಲಿ 30 ಸಾವಿರ ಜನರು ಸದಸ್ಯತ್ವ ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೇವಲ 20 ಸಾವಿರ ಜನ ಸದಸ್ಯತ್ವ ಪಡೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :