ಏಸುಕ್ರಿಸ್ತ ಆಯ್ಕೆ ಮಾಡಿದ ಹನ್ನೆರಡು ಮಂದಿ ಶಿಷ್ಯರು.

ಏಸುಪ್ರಭು ಈ ಮಾನವ ಕುಲದ ರಕ್ಷಕರಾಗಿ ಜನಿಸಿದರು. ಇವರ ಅನುಯಾಯಿಗಳು ಈಗ ವಿಶ್ವದಾದ್ಯಂತ ಕೋಟಿಗಟ್ಟಲೇ ಜನರಿದ್ದಾರೆ.

ಅವರ ಜೀವಿತ ಕಾಲದಲ್ಲಿಯೇ ಅವರಿಗೆ ನೇರವಾಗಿ ಶಿಷ್ಯರಾದವರು ಅನೇಕ ಜನ ಇದ್ದರು. ಅವರಲ್ಲಿ ಅತ್ಯಂತ ಆಪ್ತರಾದ ಹನ್ನೆರಡು ಮಂದಿಯನ್ನು ಅವರು ಆಯ್ಕೆಮಾಡಿಕೊಂಡಿದ್ದರು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇಸ್ರೇಲ್‌ನ ಬೆತ್ಲೆಹಂ ಎಂಬ ಉರಿನಲ್ಲಿ ಜನಿಸಿದ ಏಸುವಿನ ತಂದೆ ಜೋಸೆಫ್ ತಾಯಿ ಮೇರಿ.

ಸುಮಾರು 33 ವರ್ಷ ಜೀವಿಸಿದ ಏಸು ತಮ್ಮ ಕೊನೆಯ ದಿನಗಳಲ್ಲಿ ಪ್ರಿಯ ಶಿಷ್ಯರಾದ ಹನ್ನೆರಡು ಮಂದಿಯೊಂದಿಗೆ ವಾಸ ಮಾಡಿಕೊಂಡಿದ್ದರು. ಅವರೆಲ್ಲರಿಗೂ ಪರಿಶುದ್ದರೆಂಬ ಪದವಿಯನ್ನು ಕ್ರೈಸ್ತ ಮತ ದಯಪಾಲಿಸಿದೆ.

ಸೈಮನ್ ಆಂತ್ರೆಯೋ, ಯಾಕೂಬ್ ಯೋಹವಾನ್ ಫಿಲಿಪ್ಸ್ ಬಾರ್ತಿಲೇಮಿಯಾ, ಥೋಮಸ್, ಮ್ಯಾಥ್ಯೂ ,ಯಾಕೂಬ್(ಅಲ್ಬೆಯುವಿನ ಮಗ) ದದೇಯ್, ಸೈಮನ್, ಜುದಾಸ್ ಕಾರಿಯೋತ್ ಎಂಬುವವರು.

ಏಸುವಿನ ಮತಬೋದನೆಯನ್ನು ಅಂದಿನ ರೋಮ್‌ ಚಕ್ರವರ್ತಿ ಮತ್ತು ಯಹೂದಿಯರು ಸ್ವಲ್ಪವು ಇಷ್ಟಪಡಲಿಲ್ಲ. ಹೇಗಾದರು ಮಾಡಿ ಏಸುವನ್ನು ತೀರಿಸಿಬಿಡಬೇಕೆಂದು ಹುನ್ನಾರ ಮಾಡುತ್ತಿದ್ದರು. ಏಸುವಿನ ಒಬ್ಬ ಶಿಷ್ಯನಾದ ಜುದಾಸನಿಗೆ 12 ಬೆಳ್ಳಿ ನಾಣ್ಯಗಳನ್ನು ಕೊಟ್ಟು ಏಸುವನ್ನು ಕರೆದುಕೊಂಡು ಬರುವಂತೆ ತಿಳಿಸಿದರು. ಅವನು ಹಾಗೇಯೇ ಏಸುವನ್ನು ಅವರಿಗೆ ತೋರಿಸಿಕೊಟ್ಟ.

ರೋಮನ್ ಚಕ್ರವರ್ತಿ ನಿರಾಪರಾಧಿಯಾದ ಏಸುವನ್ನು ವಿನಾಕಾರಣ ಅಪವಾದ ಹೊರಿಸಿ ಶಿಲುಬೆಗೆ ಏರಿಸಿ ಕೊಲೆ ಮಾಡಿದ. ಇದನ್ನು ತಿಳಿದ ಜುದಾಸ್ ತಾನು ಮಾಡಿದ ಅಪರಾಧದ ಪ್ರಾಯಶ್ಚಿತ್ತವಾಗಿ ಬೆಳ್ಳಿ ನಾಣ್ಯಗಳನ್ನು ದೇವಾಲಯದಲ್ಲಿ ಏಸುವಿನ ಹೆಸರಿನಲ್ಲಿಯೇ ಚೆಲ್ಲಾಡಿದ. ಆನಂತರ ತಾನು ನೇಣು ಹಾಕಿಕೊಂಡು ಪ್ರಾಣತ್ಯಾಗ ಮಾಡಿದ.ಇದರಲ್ಲಿ ಇನ್ನಷ್ಟು ಓದಿ :