ಕೇರಳದಲ್ಲಿ ಕ್ರಿಸ್ಮಸ್: ಕರೋಲ್ ಪಾರ್ಟಿಯ ಆಧುನಿಕತೆ

PTI
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಕ್ರಿಸ್ಮಸ್ ಆಚರಣೆ ಹೆಚ್ಚು ಸಂಭ್ರಮ. ಬಹುಶಃ ಇದಕ್ಕೆ ಅಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಿರುವುದು ಮತ್ತು ಇತರ ಧರ್ಮೀಯರೂ ಸೌಹಾರ್ದದಿಂದ ಕ್ರಿಸ್ಮಸ್‌ನಲ್ಲಿ ಪಾಲ್ಗೊಳ್ಳುವುದು ಕಾರಣವಿರಬಹುದು.

ಕೇಂದ್ರೀಯ ಕೇರಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಶ್ಚಿಯನ್ನರಿದ್ದಾರೆ. ರಾಜ್ಯದ 32 ದಶಲಕ್ಷ ಜನಸಂಖ್ಯೆಯ ಶೇ.22 ಮಂದಿ ಕೂಡ ಕ್ರೈಸ್ತ ಬಾಂಧವರಾಗಿದ್ದು, ಇಲ್ಲಿ ಕ್ರಿಸ್ಮಸ್ ಆಚರಣೆಯ ಸಡಗರ ಸಹಜವಾಗಿ ಹೆಚ್ಚು.

ಅಲ್ಲಿ ಕ್ರಿಸ್ಮಸ್ ಹಾಡುಗಳಿಗೆ ತಮ್ಮದೇ ಆದ ವಿಶೇಷತೆಯಿದೆ. ಹಿಂದಿನ ಕಾಲದಲ್ಲಿ ಚರ್ಚುಗಳಿಂದ ಹಾಡುಗಾರರು ಪ್ರತಿ ದಿನ ನಡೆಯುತ್ತಾ ಮನೆ ಮನೆಗೆ ಭೇಟಿ ನೀಡಿ ಶುಭ ಸಂದೇಶ ಹಂಚುತ್ತಿದ್ದರೆ, ಈಗಿನ ಕಾಲದಲ್ಲಿ ಸಾಂತಾ ಕ್ಲಾಸ್ ವೇಷಧಾರಿಗಳು ಜರ್ರನೇ ಧಾವಿಸುವ ಬೈಕುಗಳ ಹಿಂಬದಿ ಕೂತು ತಿರುಗಾಡುತ್ತಿರುತ್ತಾರೆ.

ಈ ಬಾರಿ ಇದು ಮತ್ತಷ್ಟು ಆಧುನೀಕರಣಗೊಂಡಿದೆ. ಚರ್ಚುಗಳೀಗ ಲಘು ವಾಹನಗಳನ್ನು ಬಾಡಿಗೆಗೆ ಪಡೆದು, ಅವುಗಳನ್ನು ಭರ್ಜರಿ ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ಅದಕ್ಕೆ ಅತ್ಯಾಧುನಿಕ ಮ್ಯೂಸಿಕ್ ಸಿಸ್ಟಂಗಳನ್ನೂ ಅಳವಡಿಸಲಾಗುತ್ತದೆ.

ಈ ದಿನಗಳಲ್ಲಿ ಸಂಗೀತ ತಂಡಗಳನ್ನು ಸೇರಿಕೊಳ್ಳುವವರಿಗೆ ಸಮಯವೇ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಎರಡು ದಿನಗಳ ಅವಧಿಯಲ್ಲಿ ಪ್ರತಿಯೊಬ್ಬರ ಮನೆಗೆ ಭೇಟಿ ನೀಡುವುದು ತ್ರಾಸದಾಯಕವೇ. ಹಾಗಾಗಿ ನಡಿಗೆ ನಿಂತು ಹೋಗಿ ವಾಹನಗಳು ಈ ಸ್ಥಾನವನ್ನು ಆಕ್ರಮಿಸಿಕೊಂಡಿವೆ.

ಆದರೆ ದ್ವಿಚಕ್ರಗಳಲ್ಲಿ ಹೋಗುವುದು ಕೂಡ ಕಷ್ಟ. ಯಾಕೆಂದರೆ ಆರಂಭದಲ್ಲಿ ಸಾಕಷ್ಟು ಮಂದಿ ಜತೆಗಿರುತ್ತಾರೆ, ಅವರಲ್ಲಿ ಕೆಲವರು ಮಧ್ಯದಲ್ಲೇ ಕೈಕೊಡುತ್ತಾರೆ ಎನ್ನುವುದು ಕರೋಲ್ ಪಾರ್ಟಿಯೊಂದರ ಸದಸ್ಯರ ಅಭಿಪ್ರಾಯ.

ಈ ಬಾರಿ ನಾವು ಗುಂಪಾಗಿ ಹೋಗಲು ಇಚ್ಛಿಸಿದ್ದೇವೆ. ಇದರಿಂದ ಯಾರೂ ಕೂಡ ಮಧ್ಯದಲ್ಲೇ ತೊರೆದು ಹೋಗುವುದು ಸಾಧ್ಯವಿಲ್ಲ ಎಂದು ಕೋಟ್ಟಯಂನ ಸಿರಿಯನ್ ಆರ್ಥಡಾಕ್ಸ್ ಚರ್ಚ್‌ನ ಕರೋಲ್ ಪಾರ್ಟಿಯ ಮುಖ್ಯಸ್ಥ ಮ್ಯಾಥ್ಯೂ ಥೋಮಸ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರೈಸ್ತ ಧರ್ಮದ ಕುರಿತು

ಕ್ರಿಸ್ತ ಧರ್ಮದ ಆರಾಧನೆ ಮತ್ತು ಆಚರಣೆಗಳು

ತಮ್ಮ ದೈನಂದಿನ ಆಚರಣೆಗಳಲ್ಲಿ ಎಲ್ಲರೂ ಏಸುಕ್ರಿಸ್ತನ ಜೀವನವನ್ನು ಅನುಸರಿಸಲು ಪ್ರಯತ್ನಿಸಬೇಕು ಎಂದು ...

ಬೈಬಲ್ ಹಾಗೂ ಕ್ರಿಶ್ಚನ್‌ಧರ್ಮ

ಬೈಬಲ್ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ. ಗ್ರೀಕ್ ಭಾಷೆಯ ಬಿಬ್ಲಿಯಾ (BIBLIA) ಎಂಬ ಪದದ ಆಂಗ್ಲ ರೂಪ ಬೈಬಲ್. ...

ಭೂಲೋಕ ರಾಜ: ಏಸುಪ್ರಭು

ಭೂಲೋಕ ರಾಜನಾದ ಏಸುವಿಗೆ ಜನ್ಮದ ಪ್ರಾರಂಭದಿಂದಲೇ ಅನೇಕ ವಿರೋಧಿಗಳಿದ್ದರು. ಏಸು ಜನಿಸಿದಾಗ ಹೇರೋದ್ ರಾಜನ ...

ಸಂತ ಫ್ರಾನ್ಸಿಸ್ ಕ್ಸೇವಿಯರ್

ಸಂತ ಫ್ರಾನ್ಸಿಸ್ ಕ್ಸೇವಿಯರ್ 1506ರ ಎಪ್ರಿಲ್ 7ರಂದು ಸ್ಪೇನ್‌ನಲ್ಲಿ ಜನಿಸಿದವರು. ಬರಿಯ 46 ವರ್ಷಗಳ ಕಾಲ ...