ಕ್ರಿಸ್‌ಮಸ್ ಆಚರಣೆ

ವಿಶ್ವದ ಇತಿಹಾಸದಲ್ಲಿ ಅದೆಷ್ಟೋ ಮಹಾಪುರುಷರ ಜನ್ಮ ದಿನವನ್ನು ಆಚರಿಸುತ್ತೇವೆ. ಆದರೆ.ಅವರನ್ನು ಬಾಲ್ಯದಲ್ಲಿಯೇ ಗುರುತಿಸಿ ಮಹತ್ವ ನೀಡುವುದು ಅಪರೂಪ.

ಏಸು ಇಂದಿಗೆ ಸುಮಾರು 2000 ವರ್ಷಗಳಷ್ಟು ಹಿಂದೆ ಜನಿಸಿದ ಎಂಬುದು ಚಾರಿತ್ರಿಕ ದಾಖಲೆ. ಇದೇನು ಅನಿರೀಕ್ಷಿತ ಘಟನೆಯಲ್ಲ.ಅವರ ಜನ್ಮವನ್ನು ಕುರಿತು ವಿಶ್ವದಾದ್ಯಂತ ಅನೇಕ ಬಗೆಯಲ್ಲಿ ಆಚರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಅವರ ಬಾಲ್ಯವನ್ನು ಕುರಿತು ಆಚರಿಸುವುದು. ಏಕೆಂದರೆ ಅವರು ಜನಿಸಿದ್ದೇ ಜನರನ್ನು ವಾಗ್ದಾನ ಮಾಡಲು,ಆಶೋತ್ತರಗಳನ್ನು ಈಡೇರಿಸಲು.

ಏಸುವೆಂಬ ರಾಜಾಧಿರಾಜ ಎಲ್ಲಿ ಯಾವ ವಂಶದಲ್ಲಿ ಜನಿಸುತ್ತಾನೆ ಎಂಬ ವಿಚಾರವನ್ನು ಹಲವು ಶತಮಾನಗಳ ಹಿಂದೆ ಮುಂಚಿತವಾಗಿಯೇ ತಿಳಿಯಪಡಿಸಲಾಗಿತ್ತು. ಈ ಕುರಿತು ಬೈಬಲ್‌ನಲ್ಲಿ ಹೀಗೆ ವ್ಯಕ್ತವಾಗಿದೆ.

" ಒಬ್ಬ ಕನ್ಯೆ ಗರ್ಭವತಿಯಾಗಿ ಒಬ್ಬ ಮಗನನ್ನು ನೀಡುತ್ತಾಳೆ ಅವನಿಗೆ ಇಮ್ಯಾನುಯೇಲ್ ಎಂಬ ಹೆಸರನ್ನಿಡಲಾಗುವುದು "(ಏಸಾಯ 7:14)
" ಇಸ್ರೇಲನ್ನು ಆಳುವಂತಹವರು ನಿನ್ನ ಬಳಿಯಿಂದ ನನ್ನಲ್ಲಿಗೆ ಬರುತ್ತಾರೆ "(ಮೀಕಾ 5:2)
ಅಲ್ಲದೆ ಮುಂಚಿತವಾಗಿಯೇ ದೇವದೂತನು ಆತನ ತಂದೆ ಜೋಸೆಫ್‌ಗೆ ಏಸುವಿನ ಜನನದ ಬಗೆಗೆ ಹೇಳಿದ್ದನು.

ಾ|| ವಿ.ಗೋಪಾಲಕೃಷ್ಣಇದರಲ್ಲಿ ಇನ್ನಷ್ಟು ಓದಿ :