ನರಕಕೂಪಕ್ಕೆ ತಳ್ಳುವ ಪರಿಷ್ಕೃತ ಸಪ್ತ ಮಹಾ ಪಾತಕಗಳು

ಸಮಕಾಲೀನ ಪರಿಸ್ಥಿತಿಗೆ ಅನ್ವಯವಾಗುವ ಏಳು ಮಹಾ ಪಾಪಗಳನ್ನು ವ್ಯಾಟಿಕನ್ ಪಟ್ಟಿ ಮಾಡಿದೆ. ಮರುಬಳಕೆಯ ವೈಫಲ್ಯದಿಂದಾಗಿ ಉಂಟಾಗುವ ಪರಿಸರ ಮಾಲಿನ್ಯ ಅವುಗಳಲ್ಲೊಂದು.

ಪ್ಲಾಸ್ಟಿಕ್ ಚೀಲಗಳ ಮರುಬಳಕೆ ಮಾಡದೇ ಇದ್ದರೆ ಆ ವ್ಯಕ್ತಿಯೊಬ್ಬ ಶಾಶ್ವತ ನರಕ ಕೂಪಕ್ಕೆ ತಳ್ಳಲ್ಪಡುತ್ತಾನೆ ಎಂದು ವ್ಯಾಟಿಕನ್ ಹೇಳಿದೆ.

ಪೋಪ್ ಅವರ ಆಪ್ತರೂ ಆಗಿರುವ, ರೋಮನ್ ಕ್ಯುರಿಯಾದ ಮುಖ್ಯ ನ್ಯಾಯಾಸ್ಥಾನಗಳಲ್ಲೊಂದಾಗಿರುವ ಅಪಾಸ್ಟಲಿಕ್ ಪೆನಿಟೆನ್ಷಿಯರಿ ಮುಖ್ಯಸ್ಥ ಮಾನ್ಸೈನರ್ ಗಿಯಾನ್‌ಫ್ರಾಂಕೋ ಗಿರೋಟಿ ಅವರು ಈ ಸಪ್ತ ಮಹಾಪಾಪಗಳನ್ನು ಘೋಷಿಸಿದ್ದಾರೆ.

ಆನುವಂಶಿಕ ಮಾರ್ಪಾಡುಗಳು, ಮಾನವರ ಮೇಲೆ ಪ್ರಯೋಗ ನಡೆಸುವುದು, ವಾತಾವರಣ ಮಲಿನಗೊಳಿಸುವುದು, ಸಾಮಾಜಿಕ ಅನ್ಯಾಯಕ್ಕೆ ಕಾರಣವಾಗುವುದು, ಬಡತನಕ್ಕೆ ಕಾರಣವಾಗುವುದು, ಅಸಹ್ಯಕರವಾಗಿ/ಭಂಡತನದಿಂದ ಶ್ರೀಮಂತಿಕೆ ಸಾಧಿಸುವುದು ಮತ್ತು ಮಾದಕ ದ್ರವ್ಯ ಸೇವಿಸುವುದು ಸಪ್ತ ಮಹಾ ಪಾತಕಗಳು ಎಂದು ಅವರು ಹೇಳಿದ್ದಾರೆ.

ಆಲಸ್ಯ, ಅಸೂಯೆ, ಹೊಟ್ಟೆಬಾಕತನ, ದುರಾಸೆ, ಭೋಗಾಪೇಕ್ಷೆ, ಕ್ರೋಧ ಮತ್ತು ದುರಹಂಕಾರ ಎಂಬ ಹಿಂದಿನ ಕಾಲದ ಮಹಾಪಾಪಗಳು ವ್ಯಕ್ತಿಗತ ದೃಷ್ಟಿಕೋನ ಹೊಂದಿದ್ದವು ಎಂದು ಅವರು ವ್ಯಾಟಿಕನ್‌ನ ಅಧಿಕೃತ ಪತ್ರಿಕೆ 'ಒಸರ್ವಟೋರ್ ರೊಮಾನೋ'ಗೆ ಹೇಳಿರುವುದನ್ನು ಉಲ್ಲೇಖಿಸಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಇಂದಿನ ಮಹಾಪಾತಕಗಳು ವ್ಯಕ್ತಿಗತನಾಗಿಯೂ ಸಾಮಾಜಿಕವಾಗಿಯೂ ಪರಿಣಾಮ ಬೀರಬಲ್ಲವು. ನಮ್ಮ ನಮ್ಮ ಪಾಪಗಳ ಬಗ್ಗೆ ಹೆಚ್ಚು ಗಮನಹರಿಸುವುದೂ ಪ್ರಮುಖವಾದದ್ದು ಎಂದು ಗಿರೋಟಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರೈಸ್ತ ಧರ್ಮದ ಕುರಿತು

ಅಂಚೆ ವೀರ ಸಾಂತಾ ಕ್ಲಾಸ್!

ಪ್ರತಿವರ್ಷವೂ 60 ಲಕ್ಷಕ್ಕೂ ಹೆಚ್ಚು ಖಾಸಗಿ ಅಂಚೆ ಪತ್ರಗಳನ್ನು ಪಡೆಯುವ ವ್ಯಕ್ತಿ ಯಾರು? ಕ್ರಿಸ್ಮಸ್ ಸಡಗರದ ...

ಉತ್ತರ ಧ್ರುವದ ಸಾಂತಾ ಕ್ಲಾಸ್ ಹೌಸ್ ಕಥೆ

ಬಿಳಿ ಗಡ್ಡ, ಕೆಂಪು ಮಕ್ಮಲ್ ದಿರಿಸು, ಎರಡೂ ಭುಜಗಳಲ್ಲಿ ಉಡುಗೊರೆಗಳಿಂದ ತುಂಬಿದ ಚೀಲ... ಇವಿಷ್ಟು ಹೇಳಿದರೆ ...

ಕೇರಳದಲ್ಲಿ ಕ್ರಿಸ್ಮಸ್: ಕರೋಲ್ ಪಾರ್ಟಿಯ ಆಧುನಿಕತೆ

ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಕ್ರಿಸ್ಮಸ್ ಆಚರಣೆ ಹೆಚ್ಚು ಸಂಭ್ರಮ. ಬಹುಶಃ ಇದಕ್ಕೆ ...

ಸಡಗರ, ಭಕ್ತಿ ಭಾವದ ಕ್ರಿಸ್ಮಸ್

ವಿಶ್ವದೆಲ್ಲೆಡೆ ಡಿಸೆಂಬರ್ ಬಂತೆಂದರೆ ಹಬ್ಬದ ಸಡಗರ ಆರಂಭವಾಗಿರುತ್ತದೆ. ಅದರಲ್ಲೂ ಕ್ರೈಸ್ತ ಬಾಂಧವರಿಗೆ ಇದು ...