ಮೊಹರಂ ಹಬ್ಬ ಆಚರಿಸುವುದು ಏಕೆ?

picture
ಇಳಯರಾಜ|
PTI
ಈ ದಿನಾಚರಣೆಗಾಗಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಮುಂತಾದ ಎಲ್ಲ ಸಾರ್ವಜನಿಕ ಸೇವೆಗೆ ರಜಾ ದಿನಗಳನ್ನಾಗಿ ಘೋಷಿಸಲಾಗುತ್ತಿದೆ.ಇದರ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಲ್ಲವೇ.

ಮೊಹರಂ ದಿನಾಚರಣೆಯಲ್ಲಿ ಮುಖ್ಯವಾಗಿ ಮೆರವಣಿಗೆಗಳು ನಡೆಯುತ್ತವೆ ಅದು ಏಕೆ?

ಈಗಿನ ಇರಾಕ್ ನಾಡಿನಲ್ಲಿದೆ ಕರ್ಬಲಾ ಎಂಬ ಸ್ಥಳ.ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್)ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು.

ಈ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.ಇಮಾಮ್ ಮತ್ತು ಅವರ ಕುಟುಂಬದವರನ್ನು ನೆನಪಿಸಿಕೊಳ್ಳುವ ಸಲುವಾಗಿ ಉರೂರುಗಳಲ್ಲಿ ಮೆರವಣಿಗೆಯಲ್ಲಿ ಜನರು ತೆರಳುತ್ತಾರೆ.ಇಮಾಮ್ ಅವರು ತೋರಿಸಿದ ಮಾನವೀಯತೆಗಾಗಿ ಅವರಿಗೆ ಗೌರವ ತೋರಿಸುವ ರೀತಿಯಲ್ಲಿ ಈ ದಿನಾಚರಣೆಯನ್ನು ನಡೆಸಲಾಗುತ್ತದೆ. ಮೊಹರಂ ಹಬ್ಬದಲ್ಲಿ ಅತಿ ಮುಖ್ಯವಾದ ವಿಚಾರ ಇದು.
ತಮ್ಮ ಜೀವಿತವನ್ನು ಇಸ್ಲಾಂ ಧರ್ಮದ ಕಟ್ಟಪಾಡುಗಳಿಗಾಗಿ ಅವರು ಮೀಸಲಾಗಿಟ್ಟರು. ಷಿಯಾ ಪಂಗಡಕ್ಕೆ ಸೇರಿದ ಮುಸ್ಲಿಮ್‌ರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂತಹ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ.


ಇದರಲ್ಲಿ ಇನ್ನಷ್ಟು ಓದಿ :