ಮೊಹರಂ ದಿನ-ಮೆರವಣಿಗೆಗಳು

Picture
ಇಳಯರಾಜ|
PTI
ಈಗಿನ ಇರಾಕ್ ನಾಡಿನಲ್ಲಿದೆ ಕರ್ಬಲಾ ಎಂಬ ಸ್ಥಳ.ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್)ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು.ಈ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಇಮಾಮ್ ಮತ್ತು ಅವರ ಕುಟುಂಬದವರನ್ನು ನೆನಪಿಸಿಕೊಳ್ಳುವ ಸಲುವಾಗಿ ಉರೂರುಗಳಲ್ಲಿ ಮೆರವಣಿಗೆಯಲ್ಲಿ ಜನರು ತೆರಳುತ್ತಾರೆ.ಇಮಾಮ್ ಅವರು ತೋೌರಿಸಿದ ಮಾನವೀಯತೆಗಾಗಿ ಅವರಿಗೆ ಗೌರವ ತೋರಿಸುವ ರೀತಿಯಲ್ಲಿ ಈ ದಿನಾಚರಣೆಯನ್ನು ನಡೆಸಲಾಗುತ್ತದೆ. ಮೊಹರಂ ಹಬ್ಬದಲ್ಲಿ ಅತಿ ಮುಖ್ಯವಾದ ವಿಚಾರ ಇದು.

ತಮ್ಮ ಜೀವಿತವನ್ನು ಇಸ್ಲಾಂ ಧರ್ಮದ ಕಟ್ಟಪಾಡುಗಳಿಗಾಗಿ ಅವರು ಮೀಸಲಾಗಿಟ್ಟರು. ಷಿಯಾ ಪಂಗಡಕ್ಕೆ ಸೇರಿದ ಮುಸ್ಲಿಮ್‌ರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂತಹ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ.
ಮೆರವಣಿಗೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮಲ್ಲೇ ಪರಸ್ಪರ ಹಲಗೆಗಳಿಂದ ಹೊಡೆದುಕೊಳ್ಳುತ್ತಾರೆ. ಮತ್ತು ಚೂಪಾದ ಸಣ್ಣ ಆಯುಧಗಳಿಂದ ತಮ್ಮನ್ನು ತಾವೇ ತಿವಿದುಕೊಳ್ಳುವುದು ಮುಂತಾದ ಹಿಂಸಾತ್ಮಕ ಕ್ರಿಯೇಗಳನ್ನು ಪ್ರದರ್ಶಿಸುತ್ತಾರೆ.

ಭಾರತದ ಮಟ್ಟಿಗೆ ಹೇಳುವುದಾದರೆ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಈ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಾರೆ.ತಮಿಳುನಾಡು , ಕರ್ನಾಟಕ ,ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಈ ದಿನಾಚರಣೆಯನ್ನು ಮುಸ್ಲಿಮ್‌ರೊಂದಿಗೆ ಹಿಂದೂಗಳು ಸಹ ಭಾಗವಹಿಸುತ್ತಾರೆ. ವೇಷ ಭೂಷಣಗಳನ್ನು ಹಾಕಿ ನಲಿದಾಡುವವರು ಹಿಂದೂಗಳೇ ಆಗಿರುತ್ತಾರೆ.
ಹುಲಿವೇಷ, ಕರಡಿ ವೇಷ, ಗಂಡಸರು ಹೆಂಗಸಿನ ವೇಷ ಧರಿಸಿ ಕುಣಿದಾಡುವುದು ಮುಂತಾದ ಅನೇಕ ಮನರಂಜನಾ ಕಾರ್ಯಕ್ರಮಗಳು ಮೆರವಣಿಗೆಯ ಭಾಗವಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣ ನೀಡಿದವರ ಸಂಕೇತವಾಗಿ ಕೆಲವು ಲೋಹದ ರೂಪಗಳನ್ನು ಹಲಗೆಯಾಕಾರದಲ್ಲಿ ಸಿದ್ದಪಡಿಸಿ ಅವುಗಳನ್ನು ಆರಾಧನೆ ಮಾಡುತ್ತಾರೆ.ಕೊನೆಯ ದಿನ ಅವುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಆನಂತರ ಬಟ್ಟೆಗಳಲ್ಲಿ ಭಧ್ರವಾಗಿ ಸುತ್ತಿ ಮೂರನೇ ವರ್ಷದ ಆರಾಧನೆಗಾಗಿ ರಕ್ಷಿಸಿಡುತ್ತಾರೆ.
ಡಾ. ವಿ. ಗೋಪಾಲಕೃಷ್ಣ


ಇದರಲ್ಲಿ ಇನ್ನಷ್ಟು ಓದಿ :