Widgets Magazine

ಜೈನ ಧರ್ಮದ ಉಗಮ

Picture
ಇಳಯರಾಜ|
WD
ಜೈನ ಧರ್ಮವು ಬೌದ್ಧ ಧರ್ಮಕ್ಕಿಂತಲೂ ಹಿಂದಿನದು. ಜೈನ ಧರ್ಮದ ಪ್ರಮುಖ ಪ್ರವಾದಿ ವರ್ಧಮಾನ ಮಹಾವೀರನು ಜೈನ ಧರ್ಮದ ಸಂಸ್ಥಾಪಕನಾಗಿರಲಿಲ್ಲ.

ಆತ ಒಬ್ಬರ ನಂತರ ಒಬ್ಬರಂತೆ ಧರ್ಮೋಪದೇಶ ಮಾಡಿದ ಇಪ್ಪತ್ನಾಲ್ಕು ಮಂದಿ ತೀರ್ಥಂಕರರಲ್ಲಿ ಕೊನೆಯವನಾಗಿದ್ದ. ಇವನಿಗಿಂತ ಹಿಂದಿನ ಪಾರ್ಶ್ವನಾಥನು ಸುಮಾರು 250 ವರ್ಷಗಳ ಹಿಂದೆ ಜೀವಿಸಿದ್ದ ಎಂಬು ಇತಿಹಾಸಕಾರ ಜಾಕೋಬಿ ಅಭಿಪ್ರಾಯ.

ಪಾರ್ಶ್ವನಾಥನಿಗಿಂತ ಮೊದಲು ಅರಿಷ್ಟನೇಮಿ ಎಂಬ ತೀರ್ಥಂಕರ ಇದ್ದ. ಈತ ಮಹಾವೀರನಿಗಿಂತ 84,000 ವರ್ಷಗಳ ಹಿಂದೆ ಮರಣ ಹೊಂದಿದ ಎಂದು ಜೈನರು ನಂಬುತ್ತಾರೆ. ಅರಿಷ್ಟನೇಮಿಗಿಂತ ಮೊದಲು ನಾಮಿ ಎಂಬ ತೀರ್ಥಂಕರ ಜೈನ ಧರ್ಮ ಪ್ರಸಾರ ಮಾಡಿದ ಎಂಬ ಪ್ರತೀತಿ ಜೈನರಲ್ಲಿದೆ.

ಜೈನ ಮತ ಗ್ರಂಥಗಳ ಪ್ರಕಾರ ಮೊಟ್ಟ ಮೊದಲನೆಯ ತೀರ್ಥಂಕರನಾದ ವೃಷಭದೇವನು ತನ್ನ ಮಗನಾದ ಭರತನಿಗೆ ಚಕ್ರವರ್ತಿ ಪದವಿ ಬಿಟ್ಟುಕೊಟ್ಟು ಮತ ಪ್ರಚಾರ ಮಾಡಿ ತೀರ್ಥಂಕರನಾದನು. ವೃಷಭದೇವನಿಗೆ ಸಂಬಂಧಿಸಿದಂತೆ ಋುಗ್ವೇದ, ವಿಷ್ಣು ಪುರಾಣ ಭಾಗವತ ಪುರಾಣಗಳಲ್ಲಿ ಉಲ್ಲೇಖಗಳು ಕಂಡುಬರುತ್ತವೆ.

ತೀರ್ಥಂಕರರ ಕಾಲಗಳೊಳಗಿನ ಅಂತರಗಳು ಹೀಗೆ ಕಲ್ಪನಾತೀತವಾಗಿ ಸಾಗಿ ಕೊನೆಗೆ ತಮ್ಮ ಧರ್ಮವು ಅನಂತ ಕಾಲದಿಂದ ಇದೆಯೆಂದು ನಂಬುತ್ತಾರೆ.


ಇದರಲ್ಲಿ ಇನ್ನಷ್ಟು ಓದಿ :