ಸಿಖ್ ಎನ್ನುವ ಪದ ಸಂಸ್ಕ್ರತ ಶಬ್ದವಾದ ಶಿಷ್ಯ ಎನ್ನುವುದರಿಂದ ಉದ್ಬವವಾಗಿದೆ. ಪಂಜಾಬಿ ಭಾಷೆಯಲ್ಲಿ ಸಿಖ್ ಎಂದರೆ ಕಲಿಯುವವ ಎಂದರ್ಥ. ಸಿಖ್ ಧರ್ಮವನ್ನು ಪಾಲಿಸುವವರು ಸಿಖ್ಖರು ಎಂದು ಕರೆಯಲಾಗುತ್ತದೆ. ಸಿಖ್ ಧರ್ಮವು ಜಗತ್ತಿನಲ್ಲಿ ಐದನೇ ಅತಿದೊಡ್ಡ ಧರ್ಮವಾಗಿದೆ. ಸಿಖ್ ಧರ್ಮದವರಿಗೆ ಗುರು ಗ್ರಂಥ ಸಾಹಿಬ್ ಧರ್ಮ ಗ್ರಂಥವಾಗಿದೆ.ಈ ಧರ್ಮ ಗ್ರಂಥ ಸಿಖ್ ಧರ್ಮದವರಿಗೆ ಗುರುವಾಗಿ ಮಾರ್ಗದರ್ಶನ ನೀಡುತ್ತದೆ. ಸಿಖ್ ಧರ್ಮವನ್ನು ಗುರುನಾನಕ್ರು ಸ್ಥಾಪಿಸಿದ್ದು, ಈ ಧರ್ಮದಲ್ಲಿ ಹತ್ತು ಗುರುಗಳು ದಶಗುರುಗಳು