ವಾಷಿಂಗ್ಟನ್ (ಯುಎಸ್): ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ದೇಶದ ಸನ್ನದ್ಧತೆಯನ್ನು ಬಲಪಡಿಸಲು ಭಾರತಕ್ಕೆ ಹೆಚ್ಚುವರಿ 41 ಮಿಲಿಯನ್ ಡಾಲರ್ ಧನಸಹಾಯವನ್ನು ಅಮೆರಿಕ ಘೋಷಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಭಾರತವು ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ 3,00,000ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಹೋರಾಡಿತು. ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ರೋಗಿಗಳು ತತ್ತರಿಸಿದ್ದರು. ಅಮೆರಿಕದ ಆರೋಗ್ಯ ತುರ್ತು ಸಮಯದಲ್ಲಿ ಭಾರತ ಉದಾರವಾಗಿ