ಕನ್ಯಾರಾಶಿಯಲ್ಲಿ ಜನಿಸಿದವರು ಹೇಗಿರ್ತಾರೆ ಗೊತ್ತಾ?

ಬೆಂಗಳೂರು, ಶುಕ್ರವಾರ, 14 ಜುಲೈ 2017 (19:31 IST)

ಈ ಬಾರಿ ಕನ್ಯಾ ರಾಶಿಯಲ್ಲಿ ಜನಿಸಿದ ಮಂದಿಯ ಗುಣಾವಗುಣಗಳನ್ನು ಬರೆಯಲಾಗಿದೆ. ಮಕ್ಕಳು, ಮಹಿಳೆ ಹಾಗೂ ಪುರುಷ ಈ ಮೂರು ವರ್ಗಗಳಲ್ಲಿ ಕನ್ಯಾ ರಾಶಿಯ ಮನುಷ್ಯ ಸಹಜ ಗುಣಗಳು ಹೇಗಿರುತ್ತವೆ ಎಂಬುದು ಇಲ್ಲಿ ಪರಾಮರ್ಶಿಸಲಾಗಿದೆ.
ಮಕ್ಕಳು: ಕನ್ಯಾ ರಾಶಿಯ ಮಗು ತುಂಬ ಮೌನವಾಗಿರುತ್ತದೆ. ಇತರ ಮಕ್ಕಳಿಗಿಂತ ಭಿನ್ನವಾಗಿ ಕಾಣುವ ಈ ರಾಶಿಯ ಮಕ್ಕಳು ತಮ್ಮಷ್ಟಕ್ಕೆ ಯಾರ ತಂಟೆಗೂ ಹೋಗದೆ ಇರುವುದೇ ಹೆಚ್ಚು. ಆದರೆ ಚುರುಕು ಬುದ್ಧಿ, ವಿಷಯವನ್ನು ಬಹುಬೇಗ ಗ್ರಹಿಸಬಲ್ಲ ಚಾಕಚಕ್ಯತೆ ಹಾಗೂ ತುಂಬಾ ಏಕಾಗ್ರತೆ ಹೊಂದಿರುತ್ತಾರೆ. ಈ ಮಕ್ಕಳು ಬೇರೆಯವರು ತಮಗೆ ಉಣಿಸುವುದನ್ನು ಇಷ್ಟಪಡಲಾರರು. ಆದರೆ, ತಾವೇ ಕೈಯಾರೆ ತಿನ್ನುತ್ತೇವೆಂದು ಹೊರಟ ಈ ಮಕ್ಕಳ ಹೊಟ್ಟೆ ಬಿಟ್ಟು ಊಟ ಬೇರೆಡೆ ಇರುವುದಂತೂ ಖಂಡಿತ. ಇದೊಂದನ್ನು ಹೊರತುಪಡಿಸಿದರೆ, ತಂಟೆ ತಕರಾರಿಲ್ಲದ ಮಕ್ಕಳು ಇವರು. ತುಂಬ ಕ್ಲೀನ್ ಹಾಗೂ ನೀಟಾಗಿ ತಮ್ಮ ವಸ್ತುಗಳನ್ನು ಇವರು ಇಟ್ಟುಕೊಳ್ಳುತ್ತಾರೆ.
 
ಈ ಮಕ್ಕಳು ಅಪರಿಚಿತ ವ್ಯಕ್ತಿಗಳೊಂದಿಗೆ ಇವರು ಬೇಗ ಹೊಂದಿಕೊಳ್ಳುವುದಿಲ್ಲ. ಆದರೆ ತಮಗೆ ತುಂಬ ಚೆನ್ನಾಗಿ ಪರಿಚಯವಿರುವವರೊಂದಿಗೆ ಆರಾಮವಾಗಿ ಕಾಲ ಕಳೆಯಬಲ್ಲರು. ಈ ಮಕ್ಕಳಿಗೆ ಶಿಸ್ತು ಕಲಿಸುವುದು ತುಂಬಾ ಸುಲಭ. ತಮ್ಮ ಹೋಂವರ್ಕನ್ನು ಬಹು ಬೇಗನೆ ನಿಗದಿತ ಸಮಯದೊಳಗೆ ಮುಗಿಸುವ ಈ ಮಕ್ಕಳು ಅದಕ್ಕಾಗಿ ರಚ್ಚೆ ಹಿಡಿಯುವುದಿಲ್ಲ. ಆದರೆ ಈ ಮಕ್ಕಳನ್ನು ತುಂಬಾ ತೆಗಳುವುದು, ಬೈಯುವುದು ಅಥವಾ ದೂರುವುದು ಮಾಡಿದರೆ ಇವರು ಬೇಗ ಬಾಡಿಹೋಗುತ್ತಾರೆ. ಹಾಗಾಗಿ ತಿದ್ದಬೇಕಾದ ಸಂದರ್ಭ ತುಂಬ ಮೆದುವಾಗಿ, ಪ್ರೀತಿಯಿಂದ ಹೇಳಿದರೆ ಈ ಮಕ್ಕಳು ಬಹುಬೇಗನೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ.
 
ಈ ಮಕ್ಕಳು ಸ್ವಲ್ಪ ಅವಲಂಬಿಗಳಾಗಿರುವುದು ಹೆಚ್ಚು. ಗೆಳೆಯ ಗೆಳತಿಯರೊಂದಿಗೆ ಹೊಂದಿಕೊಂಡು ಆಟವಾಡಿದರೂ, ಅಮ್ಮ, ಅಪ್ಪ ಹಾಗೂ ತನ್ನ ಆಪ್ತ ಕುಟುಂಬದ ಆಸರೆ ಇವರು ಹೆಚ್ಚಾಗಿ ಬಯಸುತ್ತಾರೆ. ಅವರಿಗೆ ವಿಧೇಯರಾಗಿಯೂ ಇರುತ್ತಾರೆ. ಆದರೆ ಶಿಕ್ಷಕರು ಅಥವಾ ಇತರ ಯಾರೇ ಆದರೂ ತಾನು ಮಾಡಿಲ್ಲದ ತಪ್ಪಿಗೆ ಕೆಟ್ಟದಾಗಿ ಬೈದರೆ, ಹೊಡೆದರೆ ಇವರು ಖಂಡಿತಾ ಸಹಿಸಲಾರರು. 
 
ಹೆಚ್ಚು ಹೆಚ್ಚು ಹೊಸ ವಿಷಯಗಳನ್ನು ಕಲಿಯುವುದೆಂದರೆ ಇವರಿಗೆ ಅಚ್ಚುಮೆಚ್ಚು. ತುಂಬ ಆತ್ಮೀಯ ಗೆಳಯ ಗೆಳತಿಯರನ್ನು ಇವರು ಹೊಂದಿರುವುದಿಲ್ಲ. ಅಷ್ಟೇ ಅಲ್ಲ, ಅಷ್ಟು ಬೇಗನೆ ತಮ್ಮ ಗೆಳೆಯ ಗೆಳತಿಯಾಗಿ ಬೇರೆಯವರನ್ನು ಸ್ವೀಕರಿಸುವುದಿಲ್ಲ. ತುಂಬ ಭಾವುಕರಾದಾಗ ಈ ಮಕ್ಕಳು ಕೇವಲ ಮಾನಸಿಕ ಸಾಂತ್ವನವಷ್ಟೇ ಅಲ್ಲ, ತಮ್ಮ ಹೆತ್ತವರಿಂದ ದೈಹಿಕ ಸಾಂತ್ವನವನ್ನೂ ಬಯಸುತ್ತಾರೆ. ಆದರೆ ತಾವು ದೈಹಿಕ ಸಾಂತ್ವನ ಬಯಸುತ್ತಿದ್ದೇವೆಂದು ನೇರವಾಗಿ ಹೇಳದಿದ್ದರೂ, ಅಮ್ಮ-ಅಪ್ಪನ ಪ್ರೀತಿಯ ಬೆಚ್ಚನೆಯ ಸ್ಪರ್ಶ, ಕೆನ್ನೆಗೊಂದು ಮುತ್ತು ದಕ್ಕಿದರೆ ಇವರಿಗೆ ಸಮಾಧಾನ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಇವತ್ತು ಶನಿ ಜಯಂತಿ: ಯಾವ್ಯಾವ ರಾಶಿಗೆ ಯಾವ ಪರಿಹಾರ..? ಇಲ್ಲಿದೆ ಟಿಪ್ಸ್

ಇವತ್ತು ಶನಿ ಜಯಂತಿ.. ವೈಶಾಖ ವೈದ್ಯ ಚತುರ್ಧಶಿ ಅಮಾವಾಸ್ಯೆ. ಇಂದಿನ ದಿನವನ್ನ ಶನಿ ಹುಟ್ಟಿದ ದಿನವೆಂದು ...

news

ಭೂತಪ್ರೇತಗಳನ್ನು ಆಹ್ವಾನಿಸುತ್ತದೆ ರೆಫ್ರಿಜಿರೇಟರ್‌ನಲ್ಲಿಟ್ಟ ಹಿಟ್ಟು

ನೀವು ರೆಫ್ರಿಜಿರೇಟರ್‌ನಲ್ಲಿ ಹಿಟ್ಟನ್ನು ಇಡುತ್ತೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಖಂಡಿತ ಓದಬೇಕು. ...

news

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!

ವೇದ ಸುಳ್ಳಾದರೂ, ಶಾಸ್ತ್ರ ಸುಳ್ಳಾಗದು ಎನ್ನುವ ಮಾತಿದೆ. ಅದರಂತೆ ಶಾಸ್ತ್ರದಲ್ಲಿ ರಾತ್ರಿ ವೇಳೆ ...

news

ರಾತ್ರಿ ವೇಳೆ ದುಷ್ಟ ಶಕ್ತಿ ಹಾವಳಿ ಹೆಚ್ಚಿರುತ್ತವೆ..!

ವೇದ ಸುಳ್ಳಾದರೂ, ಶಾಸ್ತ್ರ ಸುಳ್ಳಾಗದು ಎನ್ನುವ ಮಾತಿದೆ. ಅದರಂತೆ ಶಾಸ್ತ್ರದಲ್ಲಿ ರಾತ್ರಿ ವೇಳೆ ...