ಬೆಂಗಳೂರು : ಮನೆಯಲ್ಲಿ ಸುಖ ಶಾಂತಿ ಸದಾ ನೆಲೆಸಿರಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಕೆಟ್ಟ ದೃಷ್ಟಿ ಬೀಳದಂತೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹಾಗೇ ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ಟು ಪೂಜೆ ಮಾಡಿದರೆ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಹೌದು. ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ಟರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯ ಮಹಿಳೆ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ದಕ್ಷಿಣ ಮುಖದ ಶಂಖದಿಂದ ಮನೆಯನ್ನು ಶುದ್ಧಗೊಳಿಸಬೇಕು.