ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದು ಶಂಖವಿದ್ದರೆ ಸಂತೋಷ ಜೀವನ. ಎರಡು ಶಂಖುಗಳಿದ್ದರೆ ಬಡತನ, ಮೂರು ಶಂಖುಗಳಿದ್ದರೆ ಕೆಟ್ಟ ಗುಣ, ನಾಲ್ಕು ಶಂಖುಗಳಿದ್ದರೆ ಉತ್ತಮ ಗುಣ, ಐದು ಶಂಖುಗಳಿದ್ದರೆ ಬಡತನ ಕಂಡುಬರುತ್ತದೆ. ಆರು ಶಂಖುಗಳನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಸಮರ್ಥನಾಗಿರುತ್ತಾರೆ. ಏಳರಿಂದ ಹತ್ತು ಶಂಖುಗಳನ್ನು ಪಡೆದಿರುವ ವ್ಯಕ್ತಿಯು ರಾಜಯೋಗ ಅನುಭವಿಸುತ್ತಾರೆ. ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ.