ನಿಮಗೆ ಬೀಳುವ ಕನಸುಗಳಿಗೂ ಅರ್ಥಾತ್ ಸ್ವಪ್ನಗಳಿಗೂ ಭೂತ, ಭವಿಷ್ಯ, ವರ್ತಮಾನಕ್ಕೂ ಸಂಬಂಧವಿದೆಯೇ ಎಂಬುದನ್ನು ಜ್ಯೋತಿಷ್ಯ ವಿಜ್ಞಾನದಲ್ಲೂ ಸಾಕಷ್ಟು ವಿವರಣೆಯಿದೆ. ಕನಸಿನಲ್ಲಿ ಕಂಡ ವಸ್ತುಗಳಿಗೂ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳಿಗೂ ಇರುವ ತಾಳಮೇಳವನ್ನು ಜ್ಯೋತಿಷ್ಯ ಹೀಗೆ ಹೇಳುತ್ತದೆ.ಜ್ಯೋತಿಷಿಗಳ ಪ್ರಕಾರ, ಮಲಗಿದ್ದಾಗ ಆತ್ಮ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತದೆ. ಮನಸ್ಸು ದೇಹ ವಿಶ್ರಾಂತಿಯ ಸ್ಥಿಯಲ್ಲಿದ್ದಾಗ ಪಂಚೇಂದ್ರಿಯಗಳೂ ಶಾಂತ ಸ್ಥಿತಿಯಲ್ಲಿರುತ್ತದೆ. ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಕನಸು ಕಾಣದವರಿಲ್ಲ.