ಬೆಂಗಳೂರು : ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಗೆ ಶುಕ್ರವಾರ ತುಂಬಾ ಇಷ್ಟವಾದ ದಿನ. ಇಂತಹ ಪುಣ್ಯವಾದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು. ಹಾಗೇ ಮಾಡಿದರೆ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸುತ್ತಾಳೆ. ಆ ಕೆಲಸಗಳು ಯಾವುದೆಬುದನ್ನು ಮೊದಲು ತಿಳಿಯೋಣ. ಶುಕ್ರವಾರದ ದಿನ ಮಹಿಳೆಯರು ಕಪ್ಪು ಬಣ್ಣದ ವಸ್ತ್ರಗಳನ್ನು, ಕಪ್ಪು ಬಣ್ಣದ ಬಳೆಗಳನ್ನು ಧರಿಸಬಾರದು. ಹಾಗೇ ಕಪ್ಪು ಬಣ್ಣದ ಕುಂಕುಮವನ್ನು ಸಹ ದಾರಣೆ ಮಾಡಬಾರದು. ಅಲ್ಲದೇ ಕಪ್ಪು ಬಣ್ಣದ ಬಳೆ ಹಾಗೂ ವಸ್ತ್ರವನ್ನು ಖರೀದಿಸಬಾರದು.