ಬೆಂಗಳೂರು : ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಿದೆ. ಇಂತಹ ಕೆಲಸಗಳನ್ನು ಮಾಡುವುದರಿಂದ ಗುರು ದುರ್ಬಲನಾಗುತ್ತಾನೆ. ಇದರಿಂದ ತಂದೆ ಅಥವಾ ಪತಿಗೆ ಅಥವಾ ಮಕ್ಕಳಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆಯಂತೆ. ಹೌದು. ಗ್ರಂಥಗಳ ಪ್ರಕಾರ ಗುರುವಾರ ಮಹಿಳೆ ತಲೆ ಸ್ನಾನ ಮಾಡಬಾರದು. ಕೂದಲು ಕತ್ತರಿಸಬಾರದು. ತಲೆ ಸ್ನಾನ ಮಾಡುವ ಅಥವಾ ಕೂದಲು ಕತ್ತರಿಸಿದ್ರೆ ಗುರು ದುರ್ಬಲನಾಗ್ತಾನೆ. ಪತಿ ಹಾಗೂ ಮಗುವಿನ ಪ್ರಗತಿಗೆ ಅಡ್ಡಿಯುಂಟಾಗುತ್ತದೆ. ಗುರುವಾರ ಕಸವನ್ನು ಮನೆಯಿಂದ ಹೊರಗೆ ಹಾಕಬಾರದಂತೆ.