ಬೆಂಗಳೂರು : ದೇವಸ್ಥಾನದಲ್ಲಿ ಸ್ವೀಕರಿಸಿದ ಪ್ರಸಾದವನ್ನು ಕೆಲವರು ಎಲ್ಲೆಂದರಲ್ಲಿ ಇಟ್ಟು ಮರೆತುಬಿಡುತ್ತಾರೆ. ಹೀಗೆ ಮಾಡಿದರೆ ದೋಷ ಸುತ್ತಿಕೊಳ್ಳವುದು ಖಂಡಿತ ಎಂದು ಪಂಡಿತರು ಹೇಳುತ್ತಾರೆ. ಹೌದು. ದೇವಸ್ಥಾನದಲ್ಲಿ ಭಗವಂತನ ದರ್ಶನ ಪಡೆದ ನಂತರ ಪುರೋಹಿತರು ಕೊಟ್ಟ ತೀರ್ಥ, ಕುಂಕುಮ, ಹೂವು, ಪ್ರಸಾದವನ್ನು ತೆಗೆದುಕೊಳ್ಳುತ್ತೇವೆ. ನಂತರ ಅದನ್ನು ಎಲ್ಲೆಂದರಲ್ಲಿ ಇಟ್ಟು ಮರೆತು ಹೋಗುತ್ತೇವೆ. ಹೀಗೆ ಮಾಡುವುದರಿಂದ ದೇವರಿಗೆ ಅವಮಾನ ಮಾಡಿದಂತೆ. ಇದರಿಂದ ನಿಮಗೆ ದೋಷ ಸುತ್ತಿಕೊಂಡು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.