ಮಲಗುವ ವೇಳೆ ಈ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ

ಬೆಂಗಳೂರು| pavithra| Last Modified ಮಂಗಳವಾರ, 12 ಜನವರಿ 2021 (07:01 IST)
ಬೆಂಗಳೂರು : ಕೆಲವರು ಕೆಲವು ವಸ್ತುಗಳನ್ನು ಮಲಗುವ ವೇಳೆ ಇಟ್ಟುಕೊಳ್ಳುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಮಲಗುವ ವೇಳೆ ಈ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ.

ಮಲಗುವ ವೇಳೆ ನಿಮ್ಮ ಪಕ್ಕದಲ್ಲಿ ಪರ್ಸ್ ಗಳನ್ನು ಇಟ್ಟುಕೊಳ್ಳಬೇಡಿ. ಇದರಿಂದ ಹಣಕ್ಕೆ ಮಾಡಿದಂತಾಗುತ್ತದೆ.  ಆಗ ಹಣಕ್ಕೆ ಸಂಬಂಧಿಸಿದ ಆತಂಕಗಳು ಕಾಡುತ್ತದೆ. ಹಾಗಾಗಿ ಹಣವನ್ನು ಬೀರು ಅಥವಾ ಯಾವುದೇ ಸುರಕ್ಷಿತ ಸ್ಥಳಗಳಲ್ಲಿ ಇಡಿ.
ಮಲಗುವಾಗ ಮೊಬೈಲ್, ಗಡಿಯಾರದಂತಹ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹಾಗೂ ಬೂಟು, ಚಪ್ಪಲಿಗಳನ್ನು  ನಿಮ್ಮ ಹತ್ತಿರ ಇಟ್ಟುಕೊಳ್ಳಬೇಡಿ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗೇ ಪುಸ್ತಕಗಳನ್ನು ನಿಮ್ಮ ದಿಂಬಿನ ಅಡಿ ಇಟ್ಟುಕೊಳ್ಳಬೇಡಿ. ಇದರಿಂದ ವಿದ್ಯಾದೇವತೆಗೆ ಅವಮಾನ ಮಾಡಿದಂತಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :