ಬೆಂಗಳೂರು : ಸೋಮವಾರದಂದು ಎಲ್ಲರೂ ಶಿವ ಆರಾಧನೆ ಮಾಡುತ್ತಾರೆ. ಮನೆಯಲ್ಲಿ ಶಿವನ ಫೋಟೊ ಇಟ್ಟು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇದರಿಂದ ಶಿವ ಅನುಗ್ರಹ ಪಡೆಯಬಹುದು ಎಂಬುದು ಅವರ ನಂಬಿಕೆ. ಆದರೆ ಶಿವನನ್ನು ಪೂಜಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ. *ಶಿವನನ್ನು ಆರಾಧಿಸುವಾಗ, ಅಭಿಷೇಕ ಮಾಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. *ಶಿವಲಿಂಗಕ್ಕೆ ನೀರು ಅರ್ಪಿಸುವಾಗ ಅದರಿಂದ ಹೊರಬರುತ್ತಿರುವ ನೀರನ್ನು ದಾಟಬೇಡಿ. *ಶಿವನನ್ನು ಪೂಜಿಸುವಾಗ ಆಕಸ್ಮಿಕವಾಗಿ ಕೂಡ ತುಳಸಿ ಎಲೆಗಳನ್ನು ಇಡಬೇಡಿ.