ಬೆಂಗಳೂರು : ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯವಾದ ವಸ್ತು. ಇದರಿಂದ ಶಿವನನ್ನು ಪೂಜಿಸಿದರೆ ಆತ ಬೇಗ ಪ್ರಸನ್ನನಾಗಿ ಬೇಡಿದ ವರವನ್ನು ಕರುಣಿಸುತ್ತಾನೆ ಎನ್ನುತ್ತಾರೆ. ಆದರೆ ಈ ಬಿಲ್ವಪತ್ರೆಯನ್ನು ನಮಗೆ ಬೇಕಾದ ಸಮಯದಲ್ಲಿ ಕೀಳುವಂತಿಲ್ಲ. ಆದ್ದರಿಂದ ಇದನ್ನು ಗಿಡದಿಂದ ಕೀಳುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.