ಮನೆಯ ಅಲಂಕಾರಕ್ಕೆಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಯೊಳಗೆ ಇಡಬೇಡಿ

ಬೆಂಗಳೂರು| pavithra| Last Modified ಶನಿವಾರ, 31 ಆಗಸ್ಟ್ 2019 (07:31 IST)
ಬೆಂಗಳೂರು : ಮನೆಯ ಅಲಂಕಾರಕ್ಕೆಂದು ನಾವು ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ತಿಳಿಯದೆ ಅನೇಕ ವಸ್ತುಗಳನ್ನು ಮನೆಯೊಳಗೆ ಇಡುತ್ತೇವೆ. ಆದರೆ ಅದರಲ್ಲಿ ಕೆಲವು ಮನೆಗೆ ದರಿದ್ರವನ್ನು ಆಹ್ವಾನಿಸಿತ್ತವೆಯಂತೆ.
ಹೌದು. ವಾಸ್ತು ಪ್ರಕಾರ ಪಾಪಸ್ ಗಿಡ, ಮುಳ್ಳಿನ ಗಿಡವನ್ನು ಅಲಂಕಾರಕ್ಕೆಂದು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅದೇ ರೀತಿ ಪ್ಲಾಸ್ಟಿಕ್ ಹೂವುಗಳು, ಪ್ಲಾಸ್ಟಿಕ್ ಗಿಡಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.


ಹಾಗೇ ಕೆಲವರು ತಮ್ಮ ಮನೆಯ ಶೋಕೇಸ್ ‍ನಲ್ಲಿ ಪ್ರೇಮದ ಸಂಕೇತವಾಗಿ ತಾಜ್ ಮಹಲ್ ನ್ನು ಇಟ್ಟುಕೊಳ್ಳುತ್ತಾರೆ. ಆದರೆ ಇದು ಒಂದು ಸಮಾಧಿಯಾಗಿರುವುದರಿಂದ ಇದನ್ನು ಮನೆಯಲ್ಲಿಟ್ಟುಕೊಳ್ಳುವುದೂ ದುರಾದೃಷ್ಟವನ್ನು ಆಹ್ವಾನಿಸಿದಂತೆ.

 ಇದರಲ್ಲಿ ಇನ್ನಷ್ಟು ಓದಿ :