ಬೆಂಗಳೂರು|
pavithra|
Last Modified ಸೋಮವಾರ, 13 ಜನವರಿ 2020 (06:12 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಮನೆ ದೇವರು ಅಂತ ಇರುತ್ತದೆ. ಯಾವುದೇ ಪೂಜೆ , ಶುಭ ಕಾರ್ಯಗಳನ್ನು ಮಾಡುವುದಾದರೂ ಮನೆದೇವರಿಗೆ ಮೊದಲು ಪೂಜೆ ಸಲ್ಲಿಸುತ್ತೇವೆ. ಆದರೆ ಕೆಲವರಿಗೆ ಮನೆದೇವರು ಯಾವುದೆಂದು ತಿಳಿದಿರುವುದಿಲ್ಲ. ಅಂತವರು ಈ ವಿಧಾನದಿಂದ ತಿಳಿದುಕೊಳ್ಳಬಹುದು.
*ದೇವರ ಮನೆಯಲ್ಲಿ ಒಂದು ವೀಳ್ಯದೆಲೆಯ ಮೇಲೆ ಒಂದು ಹಿಡಿ ಜೇಡಿ ಮಣ್ಣುನ್ನು ಇಟ್ಟು ಅದಕ್ಕೆ ಅರಿಶಿನ, ಕುಂಕುಮ, ವಿಭೂತಿ, ಹೂವಿಟ್ಟು, ದೂಪ, ದೀಪಗಳಿಂದ ನಿತ್ಯ ಭಕ್ತಿಯಿಂದ ಪೂಜೆ ಮಾಡಿ. ಹೀಗೆ ಮಾಡಿದರೆ ನಿಮ್ಮ ಕನಸಿನಲ್ಲಿ ಅಥವಾ ಬೇರೆಯವರಿಂದ ನಿಮ್ಮ ಮನೆ ದೇವರ ಬಗ್ಗೆ ತಿಳಿಯುತ್ತದೆ.
*ಪ್ರತೀ ತಿಂಗಳು ಅಮಾವಾಸ್ಯೆ ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿಮ್ಮ ಬೇಡಿಕೆಗಳನ್ನು ಬೇಡಿಕೊಂಡು ಬನ್ನಿ. ಹೀಗೆ 21 ಅಮಾವಾಸ್ಯೆ ಮಾಡಿದರೆ ನಿಮ್ಮ ಕನಸಿನಲ್ಲಿ ಅಥವಾ ಬೇರೆಯವರಿಂದ ನಿಮ್ಮ ಮನೆ ದೇವರ ಬಗ್ಗೆ ತಿಳಿಯುತ್ತದೆ.