ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಆದರೆ ಕೆಲವು ಮಕ್ಕಳು ತುಂಬಾ ಹಠಮಾಡುತ್ತವೆ. ಇದಕ್ಕೆ ಈ ಪರಿಹಾರವನ್ನು ಮಾಡಿ. ಎಲ್ಲರ ಮನೆಯ ಎದುರುಗಡೆ ತುಳಸಿ ಗಿಡವಿರುತ್ತದೆ. ಒಳ್ಳೆಯ ಮನಸ್ಸಿನಿಂದ ತುಳಸಿ ಕಟ್ಟೆಯನ್ನು ಸ್ವಚ್ಚ ಮಾಡಿ ಅದರ ಮುಂದೆ ರಂಗೋಲಿ ಹಾಕಿ ದೀಪವನ್ನು ಹಚ್ಚಬೇಕು. ಇದರಿಂದ ದುಷ್ಟ ಶಕ್ತಿಗಳು ನಾಶವಾಗಿ ಮನೆಯಲ್ಲಿ ಕಲಹ ಕಡಿಮೆಯಾಗುತ್ತದೆ. ಹಾಗೇ ಬೆಳಿಗ್ಗೆ ಸಮಯದಲ್ಲಿ ತುಳಸಿ ಕಟ್ಟೆಗೆ ಅರಶಿನ ಕುಂಕುಮ ಹಚ್ಚಿ ಪೂಜೆ ಮಾಡಿ.