ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತಾರೆ. ಆದರೆ ದೀಪಾರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ಇದರಿಂದ ದೇವರ ಅನುಗ್ರಹ ನಮಗೆ ಸಿಗುತ್ತದೆ. ಪ್ರಾತಃಕಾಲದ ನಾಲ್ಕು ಗಂಟೆ ಮೂವತ್ತು ನಿಮಿಷಗಳಿಂದ ಹಿಡಿದು ಆರು ಗಂಟೆಯ ಮಧ್ಯದಲ್ಲಿ ಅಂದರೆ ಮುಂಜಾನೆ ನಾಲ್ಕೂವರೆಯಿಂದ ಆರು ಗಂಟೆಯ ಒಳಗೆ ದೀಪಾರಾಧನೆಯನ್ನು ಮನೆಯಲ್ಲಿ ಮಾಡಬೇಕು. ದೀಪದಲ್ಲಿ ಮೊದಲಿಗೆ ಎರಡು ಬತ್ತಿಗಳನ್ನು ಹಾಕಬೇಕು. ಎರಡು ಬತ್ತಿಗಳು ಬಿಡಿಬಿಡಿಯಾಗಿರಬೇಕು. ಆ ಎರಡು ಬತ್ತಿಗಳು ಕೊನೆಯಲ್ಲಿ ಮಾತ್ರ ಸೇರಿರಬೇಕು.