ಬೆಂಗಳೂರು|
pavithra|
Last Modified ಶುಕ್ರವಾರ, 15 ಜನವರಿ 2021 (07:16 IST)
ಬೆಂಗಳೂರು : ಮನೆಯ ಅಲಂಕಾರಕ್ಕಾಗಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಇದರಿಂದ ಮನೆಗೆ ಒಳ್ಳೆಯದೇ? ಅಥವಾ ಕೆಟ್ಟದೇ ಎಂಬ ವಿಚಾರದಲ್ಲಿ ಕೆಲವರಿಗೆ ಗೊಂದಲವಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳವುದರಿಂದ ಮನೆಯ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಆನೆ ಇಂದ್ರ ದೇವ ಹಾಗೂ ಲಕ್ಷ್ಮೀದೇವಿಯ ವಾಹನವಾಗಿದೆ. ಇದು ಬುದ್ದಿವಂತಿಕೆ ಮತ್ತು ಜ್ಞಾನದ ಜೊತೆಗೆ ಸಂತೋಷದ ಮತ್ತು ಸಮೃದ್ಧಿಯ ಸಂಕೇತವಾಗಿದೆ.
ವಾಸ್ತುಶಾಸ್ತ್ರದ ಪ್ರಕಾರ ತಮ್ಮ ಸೊಂಡಿಲನ್ನು ಮೇಲಕ್ಕೆತ್ತಿರುವ ಆನೆಯ ಪ್ರತಿಮೆಯನ್ನು ಮನೆಯ ಅಥವಾ ಕಚೇರಿಯ ಮುಖ್ಯ ದ್ವಾರದಲ್ಲಿ ಇಟ್ಟರೆ ಕುಟುಂಬದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.