ಬೆಂಗಳೂರು : ನಾವು ಧರಿಸುವ ಬಟ್ಟೆಗಳ ಬಣ್ಣಗಳಿಗನುಸಾರವಾಗಿ ನಮಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಆದಕಾರಣ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ. *ಭಾನುವಾರದಂದು ಸೂರ್ಯ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಸೂರ್ಯನ ಸಂಪೂರ್ಣ ಅನುಗ್ರಹವಾಗುತ್ತದೆ. ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. *ಸೋಮವಾರದಂದು ಚಂದ್ರ ವಹಿಸುತ್ತಾನೆ. ಆದಕಾರಣ ಅಂದು ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಚಂದ್ರನ ಅನುಗ್ರಹದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.