ಬೆಂಗಳೂರು : ಸಾಮಾನ್ಯವಾಗಿ ಯಾವುದೇ ದೇವಸ್ಥಾನಕ್ಕೆ ಹೋದರೂ ದೇವರ ಪ್ರಸಾದವೆಂದು ಕುಂಕುಮವನ್ನು ನೀಡುತ್ತಾರೆ. ಆದರೆ ಶ್ರೀ ಗುರುರಾಯರ ಸನ್ನಿಧಾನಕ್ಕೆ ಹೋದಾಗ ಮಂತ್ರಾಕ್ಷತೆ ಕೊಡುತ್ತಾರೆ. ಇದರ ಹಿಂದೆ ಒಂದು ಕತೆಯಿದೆ, ಪವಾಡವಿದೆ. ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು