ಬೆಂಗಳೂರು : ಶಿವ ಪೂಜೆ ಮಾಡುವಾಗ ಶ್ವೇತ ಬಣ್ಣದ ಪೂಜಾ ವಸ್ತುಗಳನ್ನು ಬಳಸಿದರೆ ಬೇಗ ಫಲ ಸಿಗುತ್ತದೆಯಂತೆ. ಆದಕಾರಣ ಶಿವಲಿಂಗದ ಪೂಜೆ ಮಾಡುವಾಗ ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆ, ಹೂವುಗಳನ್ನು ಬಳಸಲಾಗುತ್ತದೆ. ಶಿವನಿಗೆ ಶ್ವೇತ ಬಣ್ಣದ ಪೂಜಾ ವಸ್ತುಗಳಿಂದ ಪೂಜಿಸಲು ಒಂದು ಮುಖ್ಯ ಕಾರಣವಿದೆ. ಅದೇನೆಂದರೆ ಶಿವನು ನಿರ್ಗುಣಕ್ಕೆ ಸಂಬಂಧಿಸಿದ ದೇವರು. ಆತ ಒಬ್ಬ ವೈರಾಗಿ. ಶ್ವೇತ ಬಣ್ಣ ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ.